ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದಿರುವ ವಾಹನಗಳ ಚಲಾವಣೆ ನಿರ್ಬಂಧ..!
ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಸ್ತೆಯಲ್ಲಿ ಓಡಾಡುವ ಎಲ್ಲ ವಾಹನಗಳಿಗೆ ಹಾಯ್ ಸೆಕ್ಯೂರಿಟಿ ನಂಬರ್ ಪ್ಲೇಟ್ ಇರಲೇಬೇಕು ಇಲ್ಲವಾದಲ್ಲಿ ದುಬಾರಿ ಮೊತ್ತದ ಪ್ರಯಾಣದ ದಂಡ ಪಾವತಿಸಬೇಕಾಗುತ್ತದೆ.
ದೇಶದ ಹಲವು ರಾಜ್ಯಗಳಲ್ಲಿ ಅಧಿಕಾರಿಗಳು ನಂಬರ್ ಪ್ಲೇಟ್ ಪರಿಶೀಲನೆ ನಡೆಸುತ್ತಿದ್ದು, ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಇಲ್ಲದಿರುವ ವಾಹನಗಳನ್ನು ತಡೆಹಿಡಿಯಲಾಗುತ್ತಿದ್ದು ಚಲನ್ ಕೂಡ ಕೊಡಲಾಗುತ್ತಿದೆ.
ದೇಶದಲ್ಲಿ ಚುನಾವಣಾ ಮಾದರಿ ನೀತಿ ಸಮಿತಿ ಜಾರಿಯಾಗಿದ್ದು ಸಾಕಷ್ಟು ನಿಯಮಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಎಚ್ ಎಸ್ ಆರ್ ಪಿ ಇಲ್ಲದಿರುವ ವಾಹನಗಳ ಚಲಾವಣೆ ನಿರ್ಬಂಧಿಸಲಾಗುತ್ತಿದೆ.
ಹಾಗೂ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದೇ ಓಡಾಡುತ್ತಿರುವ ವಾಹನಗಳು ಹತ್ತು ಸಾವಿರದವರೆಗೆ ದಂಡವು ಕೂಡ ಪಾವತಿಸುವ ಅನಿವಾರ್ಯತೆ ಉಂಟಾಗಿದೆ.
ನಿಮ್ಮ ನಿಮ್ಮ ವಾಹನಗಳಲ್ಲಿ ಅದರಲ್ಲೂ 2019 ಕ್ಕಿಂತ ಮುಂಚೆ ಖರೀದಿ ಮಾಡಿರುವ ವಾಹನಗಳಿಗೆ ಎಚ್ ಎಸ್ ಆರ್ ಪಿ (HSRP) ನಂಬರ್ ಪ್ಲೇಟ್ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎನ್ನುವುದು ಸರ್ಕಾರದ ಕಡ್ಡಾಯ ನಿಯಮವಾಗಿದೆ.
ಇದಕ್ಕಾಗಿ ಸರ್ಕಾರವು ಗಡವು ನೀಡಿತು ಸಾಕಷ್ಟು ಜನ ಆ ನಿಗದಿತ ದಿನಾಂಕದ ಒಳಗೆ ಎಚ್ ಎಸ್ ಆರ್ ಪಿ (HSRP) ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಮೇ 31 ದಿನಾಂಕ ಕೊನೆಯ ದಿನ ನೀಡಲಾಗಿದ್ದು ದೇಶದ ಇತರೆ ರಾಜ್ಯಗಳಲ್ಲಿ ಈಗಾಗಲೇ ಈ ನಿಯಮ ಕಡ್ಡಾಯಗೊಳಿಸಿದ್ದು ಯಾರು ಸೆಕ್ಯೂರಿಟಿ ನಂಬರ್ ಪ್ಲೇಟ್ ಇಲ್ಲದೇ ವಾಹನ ಚಲಾಯಿಸುತ್ತಾರೋ ಅಂತವರಿಗೆ ಐದರಿಂದ ಹತ್ತು ಸಾವಿರದವರೆಗೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.