Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಅಂತರಾಷ್ಟ್ರೀಯಕ್ರೀಡೆ

ಭಾರತ vs ನ್ಯೂಜಿಲೆಂಡ್ ಪಂದ್ಯ  ನಾಳೆಯು  ಅನುಮಾನ 

ಮೌಂಟ್ ಮೌಂಗನುಯಿ: ಭಾರತ vs ನ್ಯೂಜಿಲೆಂಡ್ ಸರಣಿಯು ವಿಪರೀತ ಹವಾಮಾನ ವೈಫಲ್ಯದಿಂದ ಕ್ರಿಕೆಟ ಅಭಿಮಾನಿಗಳಿಗೆ  ಅತ್ಯಂತ ನೀರಸವಾಗಿ ಉಂಟುಮಾಡಿದೆ. . ಶುಕ್ರವಾರದಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಸರಣಿಯ ಆರಂಭಿಕ ಪಂದ್ಯವು ನಿರಂತರ ಮಳೆಯಿಂದಾಗಿ ಒಂದೇ ಒಂದು ಎಸೆತವನ್ನು ಮಾಡದೆ  ಪಂದ್ಯ ರದ್ದುಗೊಳಿಸಲಾಯಿತು. ಭಾನುವಾರ ಮೌಂಟ್ ಮೌಂಗನುಯಿಯಲ್ಲಿ ನಡೆಯಲಿರುವ ಎರಡನೇ ಪಂದ್ಯದ ಮುನ್ಸೂಚನೆಯು ಭರವಸೆಯಂತಿಲ್ಲ.
ಭಾನುವಾರದಂದು ಮೌಂಟ್ ಮೌಂಗನುಯಿಯಲ್ಲಿರುವ ಅಕ್ಯುವೆದರ್‌ನಲ್ಲಿನ ಹವಾಮಾನ ವರದಿಯ ಪ್ರಕಾರ ಹೆಚ್ಚಾಗಿ ಮೋಡ ಕವಿದ ವಾತಾವರಣವಿದೆ. ನಾಳೆ ಮುಂಜಾನೆಯು  ತುಂತುರು ಮಳೆ , ಮಧ್ಯಾಹ್ನದ ಸಮಯದಲ್ಲಿ ಒಂದೆರಡು ಸಲ  ತುಂತುರು ಮಳೆಯೊಂದಿಗೆ ತಂಗಾಳಿ ಬಿಸುವ ಅನುಮಾನ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಕ್ಯುವೆದರ್‌ನಲ್ಲಿ ಲಭ್ಯವಿರುವ  ಹವಾಮಾನ ಅಪ್‌ಡೇಟ್‌ನ ಪ್ರಕಾರ, ಮುಂಜಾನೆ ಮೌಂಟ್ ಮೌಂಗನುಯಿನಲ್ಲಿ  ಮಧ್ಯಾಹ್ನ 12 ಗಂಟೆಗೆ ಮಳೆ ಬೀಳುವ ನಿರೀಕ್ಷೆಯಿದೆ. ಸಂಜೆ 4 ಗಂಟೆ ಸುಮಾರಿಗೆ ತುಂತುರು ಮಳೆಯಾಗುವ ಅನುಮಾನವಿದೆ .
ಪಂದ್ಯವು ಸ್ಥಳೀಯ ಕಾಲಮಾನ ರಾತ್ರಿ 7:30 ಕ್ಕೆ ಆರಂಭವಾಗಲಿದ್ದು, ಪಂದ್ಯದ ಸಮಯದಲ್ಲಿ ತುಂತುರು ಮಳೆಯಾಗುವ  ಸಾಧ್ಯತೆಯಿದೆ.
TV24 News Desk
the authorTV24 News Desk

Leave a Reply

error: Content is protected !!