ಕ್ರೈಂಜಿಲ್ಲೆಬೆಳಗಾವಿ

ಇದು ಕಾಗವಾಡದ ಕಬ್ಬಿನ ಗದ್ದೆ ಕೊಲೆ ರಹಸ್ಯ ಬಿರಿಯಾನಿ ಮೈಮುದ್ದಿನ್ ಬಂಧನ!

ಆರೋಪಿಯೊಂದಿಗೆ ಸ್ಥಳ ಮೊಹಜರು ಮಾಡುತ್ತಿರೋ ಕಾಗವಾಡ ಪೊಲೀಸರು
ಕೊಲೆ ಆರೋಪಿ ಮೈಮುದ್ದಿನ್
ಕೊಲೆಯಾದ ಶಶಿಕಾಂತ್

ಬೆಳಗಾವಿ:

ವ್ಯಕ್ತಿ ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಎಸೆದು ಹೋದ ಪ್ರಕರಣವನ್ನು ಬೆಳಗಾವಿ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ.
ಪ್ರಕರಣದ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ,ಭೀಮಾಶಂಕರ ಗುಳೇದ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು ಇದೇ ತಿಂಗಳ 20ನೇ ತಾರೀಕಿನಂದು ಶಶಿಕಾಂತ್ ಹೊನ್ನಕಾಂಬಳೆ(40)ಕೊಲೆಯಾಗಿತ್ತು.ನಳೀನ್ ಎನ್ನುವವರ ಗದ್ದೆಯಲ್ಲಿ ಶಶಿಕಾಂತ್ ಹೊನ್ನ ಕಾಂಬಳೆ ಎನ್ನುವವರ ಶವ ಸಿಕ್ಕಿತ್ತು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಹೊವಲಯದಲ್ಲಿ ನಡೆದಿದ್ದ ಘಟನೆ ಇದಾಗಿದ್ದು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ದುಷ್ಕರ್ಮಿ ಪರಾರಿಯಾಗಿದ್ದ
ಶಶಿಕಾಂತ್ ಪತ್ನಿ ಮಂಗಳಾ ಹೊನ್ನಕಾಂಬಳೆಯಿಂದ ದೂರು ಪಡೆದು ತನಿಖೆ ಪೊಲೀಸರು ತನಿಖೆಯನ್ನುಪ್ರಾರಂಭಿಸಿದ್ದರು ಕೊಲೆಯಾದ ಶಶಿಕಾಂತ ಪ್ರಕರಣದಲ್ಲಿ ಶೇಡಬಾಳ ಗ್ರಾಮದ ಮೈಮುದ್ದಿನ್ ಜಮಾದಾರ್ ಎಂಬಾತನನ್ನು ಪೊಲೀಸರು ಬಂಧಸಿದ್ದಾರೆ.ಕೊಲೆಯಾದ ಶಶಿಕಾಂತ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದ ಮೈಮುದ್ದಿನ್ ಶಶಿಕಾಂತ್ ಬಳಿ ಬಡ್ಡಿಗೆ ಹಣವನ್ನು ತೆಗೆದುಕೊಂಡಿದ್ದ,ಮುಂಚೆ ಎಲ್ಲಾ ಹಣ ತೆಗೆದುಕೊಂಡ ಹಣಕ್ಕೆ ಬಡ್ಡಿ ನೀಡಿ ಮೈಮುದ್ದಿನ್ ಸಾಲ ತೀರಿಸಿದ್ದ.ನಂತರ ಶಶಿಕಾಂತ ಬಳಿ ಮರಳಿ 20 ಸಾವಿರ ರೂಪಾಯಿ ಸಾಲವನ್ನು ಮೈಮುದ್ದಿನ್ ಪಡೆದಿದ್ದ .ಇದಕ್ಕೆ ಹೆಚ್ಚಿಗೆ ಬಡ್ಡಿಯನ್ನ ಶಶಿಕಾಂತ್ ಹೊನ್ನಕಾಂಬಳೆ ಹಾಕಿದ್ದ ಮೈಮುದ್ದಿನ್ ತಾನು ಬಡ್ಡಿಗೆ ಪಡೆದ ಹಣವನ್ನು 19 ನೇ ತಾರೀಕೂ ವಾಪಸ್ ಕೊಡ್ತಿನಿ ಎಂದು ಹೇಳಿದ್ದ ಶಶಿಕಾಂತ ಇಟ್ಟುಕೊಂಡಿದ್ದ ಹೂವಿನ ಅಂಗಡಿಯ ಬಳಿ ಹೋಗಿ
ಹಣ ಕೊಡುವೆ ಎಂದು ಗದ್ದೆಗೆ ಕರೆದುಕೊಂಡು ಹೋಗಿ ತಲೆಯ ಮೇಲೆ ಕಲ್ಲು ಎತ್ತು ಹಾಕಿ ಮೈಮುದ್ದಿನ್ ಶಶಿಕಾಂತನನ್ನು
ಕೊಲೆ ಮಾಡಿ ಕೊಲೆ ಮಾಡಿ ನಂತರ ಕೊಲೆಗೆ ಬಳಸಿದ ಕಲ್ಲು ಹಾಗೂ ಮೃತ ಶಶಿಕಾಂತನ ಮೊಬೈಲ್ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಕೃಷಿ ಹೊಂಡಕ್ಕೆ ಹಾಕಿ ಸ್ಥಳದಿಂದ ಕಾಲ್ಕಿತ್ತಿದ್ದ
ವೃತ್ತಿಯಲ್ಲಿ ಚಿಕನ್ ಬಿರಿಯಾನಿ ಅಂಡಗಿ ಇಟ್ಟುಕೊಂಡಿದ್ದ ಮೈಮುದ್ದಿನ್ ಸಧ್ಯ ಕೊಲೆ ಪ್ರಕರಣದಲ್ಲಿ ಕಾಗವಾಡ ಪೊಲೀಸರ ಅತಿಥಿಯಾಗಿದ್ದು‌ ಕೇವಲ 20 ಸಾವಿರ ರೂಪಾಯಿಗಾಗಿ ಕೊಲೆ ನಡೆದಿದೆ ಎಂದು ಮಾಧ್ಯಮಗಳಿಗೆ ಎಸ್ಪಿ ಡಾ, ಭೀಮಾಶಂಕರ್ ಗುಳೇದ ತಿಳಿಸಿದರು.

TV24 News Desk
the authorTV24 News Desk

Leave a Reply