ಬೆಳಗಾವಿ:
ಬೆಳಗಾವಿಯ ಬೈಲಹೊಂಗಲ ಪೊಲೀಸರು ನಾಲ್ವರು ಜಬರಿ ಕಳ್ಳರನ್ನು ಬಂಧಿಸಿದ್ದಾರೆ. ಜನರಿಗೆ ಜಬರದಸ್ತ ಮಾಡಿ ಅವರ ಕೊರಳಲ್ಲಿದ್ದ ಮೈಮೇಲಿದ್ದ ಬಂಗಾರದ ಆಭರಣಗಳನ್ನು ಕಿತ್ತುಕೊಂಡು ಖದೀಮರ ತಂಡ ಪರಾರಿಯಾಗುತ್ತಿತ್ತು ಎನ್ನಲಾಗಿದೆ. ಈ ಕುರಿತು ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬೆನ್ನಲ್ಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ,ಭೀಮಾಶಂಕರ್ ಗುಳೇದ ಖದೀಮರ ಹೆಡೆ ಮುರಿ ಕಟ್ಟಲು ತಂಡವನ್ನು ರಚನೆ ಮಾಡಿದ್ದರು. ವೈಜ್ಞಾನಿಕ ಸಾಕ್ಷಿಗಳನ್ನು ಆಧರಿಸಿ ಒಟ್ಟು ನಾಲ್ವರು ಖದೀಮರನ್ನು ಬೈಲಹೊಂಗಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಪಾರನಟ್ಟಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಪಾರನಟ್ಟಿ ನಿವಾಸಿಗಳಾದ ಬಸವರಾಜ್ ಗೋದಿ,ಸಿದ್ದಪ್ಪ ಧರ್ಮಟ್ಟಿ,ಮುತ್ತೆಪ್ಪ ಪೂಜೇರಿ, ಬಸವರಾಜ್ ಪೂಜೇರಿ ಬಂಧಿತರು. ಬಂಧಿತರಿಂದ 12.5 ಗ್ರಾಂ ತೂಕದ ಚಿನ್ನದ ಸರ ಹಾಗೂ 50 ಗ್ರಾಂ ತೂಕದ ಚಿನ್ನದ ಗಂಟೇನ್, ಬಂಗಾರದ ಎರಡು ಸರ ಸೇರಿ ಒಟ್ಟು 6,70,000 ಸಾವಿರ ರೂಪಾಯಿ ಮೌಲ್ಯದ ಬಾಬತ್ತು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಕಳಿಸಿದ್ದಾರೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




