ಬೆಳಗಾವಿ:
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಿಕಿಗೆ ಬಂದಿದ್ದು ಈ ಕುರಿತು
ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಮಾತನಾಡಿ ಅಪೆಕ್ಸ್ ಬಿಜ್ ಕಾರ್ಪ್ ಎಲ್‌ಎಲ್‌ಪಿ ಕಂಪನಿಯಿಂದ ವಂಚನೆಯಾಯಾಗಿದೆ.13ಜುಲೈ ಅಶೋಕ ಬಿಸಗುಪ್ಪಿ ಎಂಬಾತ ಟಿಳಕವಾಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.ಸಾವಿರಾರು ಜನರು ಅಪೆಕ್ಸ್ ಕಂಪನಿಯಲ್ಲಿ ಇನ್ವೆಸ್ಟ್ ಮಾಡಿದಾರೆ ನಾಲ್ಕು ಪರ್ಸಂಟ್ ಇಂಟ್ರಸ್ಟ್ ಕೊಡ್ತೇವಿ ಅಂತಾ ಆಮಿಷ ಒಡ್ಡಲಾಗಿದೆ.ಹಣ ಕೂಡಿಕೆ ಮಾಡಿದವರಿಗೆ ಹ್ಯಾಂಡ್ ಲೋನ್ ಅಗ್ರಿಮೆಂಟ್ ಮತ್ತು ಚೆಕ್ ಕೊಟ್ಟಿದ್ದಾರೆ. ಆದ್ರೇ ಹಣ ವಾಪಾಸ್ ನೀಡದೇ ಪರಾರಿಯಾಗಿದ್ದಾರೆ.ಹೂಡಿಕೆದಾರರ ದೂರಿನನ್ವಯ ಎಫ್ಐಆರ್ ದಾಖಲಾಗಿದೆ.ಕಾಶಿನಾಥ್ ವಾಗ್ಮರೆ ಆತನ ಪತ್ನಿ ಹಾಗೂ ಗಣೇಶ್ ಬಂಡಾರಿ ಆತನ ಪತ್ನಿ ಸೇರಿ ಹಲವರು ಇದರಲ್ಲಿ ಭಾಗಿಯಾಗಿದ್ದಾರೆ.160ಕೋಟಿ ಪ್ರಾಡ್ ಮಾಡಿದಾರೆ ಅಂತಾ ದೂರು ಬಂದಿದೆ.ಹಣದ ಮೊತ್ತ ಐವತ್ತು ಕೋಟಿಗೂ ಹೆಚ್ಚು ಇರುವುದರಿಂದ ಸಿಐಡಿಗೆ ವರ್ಗಾವಣೆ ಮಾಡುತ್ತೇವೆ.
ಪಾರಾರಿಯಾಗಿದ್ದ ಆರೋಪಿಗಳನ್ನು ಪತ್ತೆ ಮಾಡುತ್ತೆವೆ ಎಂದಿದ್ದಾರೆ.












