Uncategorized

ಬೆಳಗಾವಿಯಲ್ಲಿ ಫೈರಿಂಗ್ ಮಾಡಿ ವ್ಯಕ್ತಿಯ ಹತ್ಯೆಗೆ ಯತ್ನ! ಕಮಿಷ್ನರ್ ಕಚೇರಿ ಕೂಗಳತೆ ದೂರದಲ್ಲಿಯೇ ಘಟನೆ!

ಬೆಳಗಾವಿ:

ಬೆಳಗಾವಿಯ ಪೊಲೀಸ್ ಕಮೀಷನರ್ ಕಚೇರಿ ಪಕ್ಕದಲ್ಲೇ ಫೈರಿಂಗ್ ನಡೆದಿದೆ.ಬೆಳಗಾವಿ ನಗರದ ಜಿಮಖಾನ್ ಕ್ಲಬ್ ನಲ್ಲಿ ಫೈರಿಂಗ್ ಮಾಡಿ ವ್ಯಕ್ಯಿಯ ಹತ್ಯೆಗೆ ಯತ್ನ ನಡೆಸಲಾಗಿದೆ. ರಮ್ಮಿ ಕ್ಲಬ್ ನಲ್ಲೇ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಹತ್ಯೆಗೆ ಯತ್ನಿಸಿದ್ದಾರೆ..ಸುರೇಶ್ ಜಾಲಗಾರ ಎಂಬಾತನ ತಲೆಗೆ ಗನ್ ದಿಂದ ಕುಕ್ಕಿ ಬಳಿಕ ಫೈರಿಂಗ್ ಮಾಡಿದ್ದು ಫೈರಿಂಗ್ ಮಾಡುವ ಮುನ್ನವೇ ವ್ಯಕ್ತಿಯನ್ಮು ತಳ್ಳಿ ಸುರೇಶ್ ಎಸ್ಕೇಪ್ ಆಗಿದ್ದಾನೆ.ತಕ್ಷಣ ಮತ್ತೆ ಫೈರಿಂಗ್ ಮಾಡಿ ದುಷ್ಕರ್ಮಿಗಳು ಹತ್ಯೆಗೆ ಯತ್ನಿಸಿದ್ದಾರೆ.ಸುರೇಶ್ ಪರಾರಿಯಾದ ಬಳಿಕ ಹೊರ ಬಂದು ಮತ್ತೆ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ದುಷ್ಕರ್ಮಿವಳು ಪರಾರಿಯಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.ಐದು ಜನ ಜಿಮ್ ಖಾನಾ ಕ್ಲಬ್ ಗೆ ಎಂಟ್ರಿಯಾಗಿದ್ದರು ಎನ್ನಲಾಗಿದ್ದು ಇಬ್ಬರು ಹೊರ ನಿಂತ್ರೇ ಮೂರು ಜನ ಒಳ ಬಂದು ಹತ್ಯೆಗೆ ಯತ್ನ ನಡೆಸಿದ್ದಾರೆ.ರಮ್ಮಿ ಆಡ್ತಿದ್ದ ಸುರೇಶ್ ಮೇಲೆ ಫೈರಿಂಗ್ ಮಾಡಿ ಹತ್ಯೆಗೆ ಯತ್ನ ನಡೆಸಲಾಗಿದ್ದು ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಭೇಟಿ ನೀಡಿ
ಘಟನೆಯ ಕುರಿತು ಮಾಹಿತಿ ಪಡೆದು ತೆರಳಿದ್ದಾರೆ.ಇನ್ನು ಸ್ಥಳಕ್ಕೆ ಪೊಲೀಸರು ಬರ್ತಿದ್ದಂತೆ ಸುರೇಶ್ ಜಾಲಗಾರ ಪ್ರಾಣ ಉಳಿಸಿಕೊಂಡು ಓಡೋಡಿ ಬಂದಿದ್ದಾನೆ.ಪ್ರಫುಲ್ ಪಾಟೀಲ್ ಎಂಬಾತನ ಮೇಲೆ ಈ ಹಿಂದೆ ಸುರೇಶ್ ಜಾಲಗಾರ ಫೈರಿಂಗ್ ಮಾಡಿದ್ದ ಎನ್ನಲಾಗಿದ್ದು ಇದರ ಸೇಡು ತೀರಿಸಿಕೊಳ್ಳಲು ಇಂದು ಪ್ರಫುಲ್ ಪಾಟೀಲ್ ಕಡೆಯ ಹುಡುಗರಿಂದ ಹತ್ಯೆಗೆ ಯತ್ನ ಮಾಡಿದ್ದಾರೆಂದು ಸುರೇಶ್ ಜಾಲಗಾರ ತಿಳಿಸಿದ್ದಾ‌ನೆ. ಸದ್ಯ ಸುರೇಶ್ ನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದು ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.ಇನ್ನು ಜಿಮಖಾನ್ ಕ್ಲಬ್ ನಲ್ಲಿ ದುಷ್ಕರ್ಮಿಗಳ ಕೃತ್ಯದ ದೃಶ್ಯ ಬೆಚ್ಚಿ ಬೀಳಿಸುವಂತಿದೆ. ಘಟನೆಯ ಇಡೀ ದೃಶ್ಯವು
ಸಿಸಿಟಿವಿಯಲ್ಲಿ ಸೆರೆಯಾಗಿದ್ದು
ಇಬ್ಬರು ದುಷ್ಕರ್ಮಿಗಳು ಕೈಯಲ್ಲಿ ಗನ್ ಹಿಡಿದು ಅಟ್ಟಹಾಸ ಮೆರೆದ ದೃಶ್ಯ ಸೆರೆಯಾಗಿದೆ.ಇಬ್ಬರು ಕೈಯಿಂದ ಸುರೇಶ್ ಜಾಲಗಾರ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾ‌ನೆ.ಇಬ್ಬರು ರಾಜಾರೋಷವಾಗಿ ಗನ್ ಹಿಡಿದು ಅಟ್ಟಹಾಸ ಮೆರೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

TV24 News Desk
the authorTV24 News Desk

Leave a Reply