Uncategorized

ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ! ಇನ್ನೂ ಮಳೆಯ ನಿರೀಕ್ಷೆಯಲ್ಲಿದ್ದೆವೆ ಸಚಿವ ಸತೀಶ್!

ಚಿಕ್ಕೋಡಿ:

ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೋಳಿ ಚಿಕ್ಕೋಡಿಯಲ್ಲಿ ಭಾಗದಲ್ಲಿ ಜನರ ಸಮಸ್ಯೆ ಆಲಿಸಲು ಬಂದಿರುವೆ ರಾಜ್ಯದಲ್ಲಿ ಚಿಕ್ಕೋಡಿ ಭಾಗದಲ್ಲಿ ಮಳೆ ಕಡಿಮೆ ಆಗಿದೆ.ಜನರ ಸಮಸ್ಯೆ ಆಲಿಸಿ ಪರಿಹಾರ ನೀಡುವ ಕೆಲಸ ಮಾಡ್ತಿವಿ ಎಂದರು.ಕುಡಿಯುವ ನೀರಿಗೆ ಯಾವುದೆ ಸಮಸ್ಯೆ ಇಲ್ಲಾ ಇನ್ನು ಮಳೆ ಆಗುತ್ತೆ ಎಂಬ ನಿರೀಕ್ಷೆ ಇದೆ ಎಂದರು.ಹಲವೆಡೆಗಳಲ್ಲಿ ಬೆಳೆ ಹಾನಿ ಆಗಿದೆ‌‌. ಸಮೀಕ್ಷೆ ಆಗಬೇಕು ಅದರ ಕುರಿತಾಗಿ ಸರ್ಕಾರ ನಿರ್ಧಾರ ಮಾಡುತ್ತೆ ಎಂದರು.ಜಿಲ್ಲೆಯಲ್ಲಿ ಜವಾಬ್ದಾರಿಗಳ ವಿಚಾರದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಹಲವು ಬದಲಾವಣೆ ಆಗುತ್ತೆ ಜಿಲ್ಲೆ ಚಿಕ್ಕೋಡಿ ಜಿಲ್ಲೆ ವಿಚಾರದಲ್ಲಿ ಚರ್ಚೆ ನಡೆದಿದೆ.ಬೆಳಗಾವಿಯಲ್ಲಿ RSS ಸಭೆ ವಿಚಾರ ಅನಾಹುತ ಎಂಬ ಬಿಕೆ ಹರಿಪ್ರಸಾದ ಹೇಳಿಕೆ ವಿಚಾರಕ್ಕೆ ನನಗೆ ಆ ವಿಚಾರ ಗೊತ್ತಿಲ್ಲಾ, ಮುಂದೆ ಏನ್ ಆಗುತ್ತೆ ಕಾದು ನೋಡಬೇಕು ಎಂದು ಹೇಳಿದರು.ಇನ್ನು ಗಾನ ಕೋಗಿಲೆ ಎಸ್. ಜಾನಕಿ ನಿಧನ ವಿಚಾರಕ್ಕೆ
ಅವರು ಓರ್ವ ಒಳ್ಳೆಯ ಗಾಯಕರು,ಕರ್ನಾಟಕಕ್ಕೆ ದೊಡ್ಡ ಹಾನಿಯಾಗಿದೆ ಎಂದು ಎಸ್ ಜಾನಕಿ ಅವರ ನಿಧನಕ್ಕೆ ಜಾರಕಿಹೊಳಿ ಸಂತಾಪ ಸೂಚಿಸಿದರು.

TV24 News Desk
the authorTV24 News Desk

Leave a Reply

error: Content is protected !!