ಬೆಳಗಾವಿ

ಕೊನೆಗೂ ಚಾಕೊಲೇಟ್ ಗ್ಯಾಂಗ್  ಅರೆಸ್ಟ್..!  

ಬೆಳಗಾವಿ – ಗೋವಾ ಮಾರ್ಗದಲ್ಲಿ ತಮ್ಮ ಕೈ ಚಳಕ ತೋರಿಸಿದ್ದ ಚಾಕೊಲೇಟ್ ಗ್ಯಾಂಗ್, ಇದೀಗ ಸಿಕ್ಕಿಬಿದ್ದಿದ್ದಾರೆ. ರೈಲಿನಲ್ಲಿ ಪ್ರಯಾಣಿಸುವವರನ್ನೇ ಟಾರ್ಗೆಟ್ ಮಾಡಿ ಲೂಟಿ ಮಾಡುತ್ತಿದ್ದ ಕಳ್ಳರನ್ನು ಹಿಡಿಯುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.  ಬೆಳಗಾವಿ-ಗೋವಾ ರೈಲಿನಲ್ಲಿ ಆ್ಯಕ್ಟಿವ್ ಆಗಿದ್ದ ಚಾಕೊಲೇಟ್ ಗ್ಯಾಂಗ್, ಪ್ರಯಾಣಿಕರ ಸೊಗಿನಲ್ಲಿ ಬಂದು ಗೆಳೆತನ ಬೆಳಸಿ ದರೋಡೆ ಮಾಡುತ್ತಿದ್ದರು. ಅದರಂತೆ ಇದೆ ಸೆ. 13 ರಂದು ಎಂಟು ಜನ ಪ್ರಯಾಣಿಕರಿಗೆ ಮದ್ದು ಬರುವ ಚಾಕೊಲೇಟ್ ನೀಡಿ ಹಣ, ಮೊಬೈಲ್ ದೋಚಿದ್ದರು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
TV24 News Desk
the authorTV24 News Desk

Leave a Reply