

ಬೆಳಗಾವಿ:
ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೇ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.ಬೆಳಗಾವಿಯಲ್ಲಿ ಕಾರ್ಮಿಕ ಇಲಾಖೆಯಿಂದ ನಡೆದ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಂತೋಷ ಲಾಡ್ 11 ವರ್ಷಗಳಿಂದ ಇಡೀ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲಾಗ್ತಿದೆ.ರಾಷ್ಟ್ರೀಯ ಮಾಧ್ಯಮಗಳ ಪ್ರೈಮ್ ಟೈಮಲ್ಲಿ ಏನು ಬರುತ್ತೋ ಅದನ್ನೇ ನೋಡಿ ಸುಮ್ಮನಾಗೋದು ಆಗಿದೆ.
ರಾಷ್ಟ್ರೀಯ ಮಾಧ್ಯಮದ ಕೆಲ ನಿರೂಪಕರು ಬಿಜೆಪಿ ವಕ್ತಾರರಂತೆ ಮಾತನಾಡುತ್ತಾರೆ.ಪಾರ್ಲಿಮೆಂಟ್ ಸೆಷನ್ ನಡೆದಿದೆ, ಇಂಥ ಸಮಯದಲ್ಲಿ ಪಿಎಂ ಅವರು ವಿದೇಶಕ್ಕೆ ಏಕೆ ಹೋಗಬೇಕಿತ್ತು ಎಂದು ಪ್ರಶ್ನೆ ಮಾಡಿದ ಅವರು
90 ದೇಶ ಒಳಗೊಂಡಂತೆ 180 ಸಲ ಮೋದಿ ಅವರು ವಿದೇಶ ಪ್ರವಾಸ ಮಾಡಿದ್ದಾರೆ. ಪಾರ್ಲಿಮೆಂಟ್ ಸೆಷನ್ ನಡೆಯಬೇಕಾದ್ರೆ ವಿದೇಶ ಪ್ರವಾಸ ಏಕೆ ಮಾಡಬೇಕು,ಸದನದಲ್ಲಿ ಇದ್ದು ಉತ್ತರ ಕೊಡಬಾರದಾ? ಇದನನ್ನು ಕೇಳುವ ಅವಕಾಶ ಇಲ್ಲವೇ? ಎಂದರು. ಬಡವರಿಗೆ, ಕಟ್ಟ ಕಡೆಯ ವ್ಯಕ್ತಿಗೂ ಪ್ರಶ್ನಿಸುವ ಅಧಿಕಾರ ಇದೆ, ಆದರೆ ಅವರಿಗೆ ಕೇಳಬಾರದು ಮೋದಿ ಸಾಹೇಬ್ರರನ್ನು ಯಾರೂ, ಏನೂ ಪ್ರಶ್ನಿಸಬಾರದು, ಬಿಜೆಪಿ ವಿರುದ್ಧ ಮಾತನಾಡಬಾರದು ಅಷ್ಟೇ
ಮಾಧ್ಯಮಗಳಿಗೂ ಇಂದು ಆ ಸ್ವಾತಂತ್ರ್ಯ ಇಲ್ಲದಾಗಿದೆ ಎಂದು ಸಂತೋಷ ಲಾಡ್ ಪ್ರಧಾನಿ ಮೋದಿ ಹಾಗೂ ಅವರ ಆಡಳಿತದ ವಿರುದ್ಧ ಹರಿಹಾಯ್ದರು.