




ಬೆಳಗಾವಿ:
ಬೆಳಗಾವಿ ಗ್ರಾಮೀಣ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಖಾಸಗಿ ಫ್ಯಾಕ್ಟರಿಯಲ್ಲಿ ಕಳ್ಳತನವಾಗಿದ್ದ ತಾಮ್ರ ತಂತಿಯ ಖದೀಮರನ್ನು ಹಡೆಮುರಿ ಕಟ್ಟಿದ್ದಾರೆ. ಬೆಳಗಾವಿ ತಾಲೂಕಿನ ವಾಘಮುಡೆ ಗ್ರಾಮದಲ್ಲಿರುವ ಖಾಸಗಿ ಫ್ಯಾಕ್ಟರಿಯ ಬೀಗ ಮುರಿದು ಖದೀಮರು ಕಳ್ಳತನ ಮಾಡಿ ಪರಾರಿಯಾಗಿದ್ದರು. ಅನುಮಾಸ್ಪದ ವಾಹನಗಳ ಪರಿಶೀಲನೆಯ ವೇಳೆ ವಾಹನ ಚಾಲಕನನ್ನು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಧೂಳಪ್ಪಗೋಳ್,ಸಂತೋಷ್ ನಾಯಕ್,ಲಗಮಪ್ಲ ಯರಗಾಣೆ,ಸೋಮಯ್ಯ ಹಿರೇಮಠ್,ಪ್ರಜ್ವಲ್ ಕಂಬಿ,ಎಂಬ ಐವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಲಕ್ಷ ಮೌಲ್ಯದ 15 ಬಂಡೆಲ್ ತಾಮ್ರದ ತಂತಿ ಹಾಗೂ 2 ಲಕ್ಷ 80 ಸಾವಿರ ಮೌಲ್ಯದ ಆಟೋ ರಿಕ್ಷಾ ಸೇರಿ ಒಟ್ಟು 3 ಲಕ್ಷ 80 ಸಾವಿರ ರೂ ಮೌಲ್ಯದ ಬಾಬತ್ತು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.