ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಕಂದಾಯ ದಿನಾಚರಣೆ ನಿಮಿತ್ಯ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮೀಡಿಯಾ ಕಿಟ್ ವಿತರಿಸಿ ನಂತರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ
ಏಳು ಜಿಲ್ಲೆಗಳ ವಿಭಾಗ ಮಟ್ಟದ ಸಮಸ್ಯೆಗಳ ಬಗ್ಗೆ ಸಭೆ ಮಾಡುತ್ತೆನೆ ಎಂದು ಮಾಹಿತಿ ನೀಡಿದರು.ಮಳೆ ಕಡಿಮೆ ಆಗಿರೋ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆ, ಜನರಿಗೆ ಉದ್ಯೋಗ ಒದಗಿಸೋ ಸಮಸ್ಯೆ, ಬೆಳಗಳು ನಾಶದ ಸಮಸ್ಯೆಗೆ ಕುರಿತು ಚರ್ಚಿಸುತ್ತೆನೆ.ಮಳೆ ಆಗದ ಕಾರಣ ಬಿತ್ತನೆ ಆಗಿಲ್ಲ ಅದರ ಪರಿಣಾಮ ಜನರ ಮೇಲೆ ಆಗಿದೆ ಅನ್ನೋದರ ಸಮಸ್ಯೆ ಬಗ್ಗೆ ಅವಲೋಕನ ಮಾಡುತ್ತೇನೆ.
ಬೆಳಗಾವಿ ಜಿಲ್ಲೆಯಲ್ಲಿ ಬರದ ಛಾಯೆ ಕಾಣಿಸುತ್ತಿದೆ ಕುಡಿಯುವ ನೀರಿನ ಸಮಸ್ಯೆ ಕಾಣ್ತಿದೆ.ಏಳು ಜಿಲ್ಲೆಗಳಲ್ಲಿ 20-30ರಷ್ಟು ಮಳೆ ಆಗಿದೆ ಜಲಾಶಯ ಮಟ್ಟ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ.ಮಳೆ ಆಗದಿದ್ದರೆ ಇತಿಹಾಸ ಸೃಷ್ಟಿಯಾಗಲಿದೆ.ಕುಡಿಯುವ ನೀರಿನ ಸಮಸ್ಯೆ ಆಗದಂತೆ ರಾಜ್ಯದಲ್ಲಿ ಪ್ಲಾನ್ ಆಪ್ ಆಕ್ಷನ್ ಮಾಡಿದ್ದೇವೆ ಪಿಡಿ ಅಕೌಂಟ್ ನಲ್ಲಿ ಪ್ರತಿ ಜಿಲ್ಲೆಯಲ್ಲಿ 5ಕೋಟಿ ಹಣ ಮೀಸಲು ಇಟ್ಟಿದ್ದೇವೆ ಎಂದರು.ಇನ್ನು ಪಾವತಿ ಖಾತೆ, ಹಕ್ಕು ಪತ್ರ, ಕಂದಾಯ ಗ್ರಾಮ, ಆಕಾರ ಬದು ಮಾಡಲಾಗ್ತಿದೆ
ಕಳೆದ ಮೂರು ವರ್ಷದಿಂದ ಈ ಕಾರ್ಯ ನಡೆಯುತ್ತಿದೆ
ಟೈಮ ಲೈನ ಪ್ರಕಾರ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ABC ಕೇಟಗೆರಿ ಮೂರು ವರ್ಗದಲ್ಲಿ ದೇವಸ್ಥಾನ ಇದೆ
ಜಮೀನು ಒತ್ತುವರಿ ಆಗಿರೋದು ಕಂಡುಬಂದಿದೆ.ಸರ್ವೇ ಮಾಡಲು ಡಿಸಿಗೆ ಸೂಚನೆ ಕೊಟ್ಟಿರುವೆ ಎಂದರು.ಹೆಚ್ಚು ಜನರು ಹೋಗುವ ದೇವಸ್ಥಾನ Aಕೆಟಗೇರಿ ಎಂದು ಗುರುತು ಮಾಡಲಾಗಿದೆ.
ದೇವಸ್ಥಾನಕ್ಕೆ ಬರೋರಿಗೆ ತೊಂದರೆ ಆಗದಂತೆ ಮಾಸ್ಟರ್ಸ್ ಪ್ಲಾನ್ ಮಾಡಲು ಸೂಚನೆ ಕೊಟ್ಟಿದ್ದೇನೆ.ದೇವಸ್ಥಾನ ಬರೋ ಹಣ ಅಲ್ಲಿಯೇ ಖರ್ಚು ಮಾಡಬೇಕು.ಪ್ರಾಧಿಕಾರ ಇಲ್ಲವೋ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಬೇಕು
ದೇವಸ್ತಾನದಲ್ಲಿನ ಹಣ ಯಾವುದೇ ಕಾರಣಕ್ಕೂ ಪೋಲಾಗೊದಕ್ಕೆ ನಾವು ಬಿಡೊದಿಲ್ಲ.ಅಯೋದ್ಯಲ್ಲಿ ಆಗಿರೋ ಘಟನೆ ನಮಗೆ ಎಚ್ಚರಿಕೆ ಘಂಟೆಯಾಗಿದೆ.ಇನ್ನು ಪರಮೇಶ್ವರ ಮಾತಿನ ಮದ್ಯೆಯೇ ಮಾತನಾಡಿದ ಜಿಲ್ಲಾಧಿಕಾರಿಗಳು ದೇವಸ್ಥಾನದಲ್ಲಿ ಅವ್ಯವಹಾರ ಆಗದಂತೆ ಸ್ಟ್ಯಾಂಡರ್ಡ್ ಆಪರೇಟಿವ್ ಕಮೀಟಿ ರಚನೆ ಮಾಡುತ್ತೇವೆ ಎಂದು ಡಿಸಿ ಹೇಳಿದರು.













