Uncategorized

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಣೆಯಾದವರನ್ನು ಹುಡುಕಿದ ಪೊಲೀಸರು ಒಟ್ಟು 12 ಜನ ಮರಳಿ ಕುಟುಂಬಳಿಗೆ!

ಬೆಳಗಾವಿ:

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬೆಳಗಾವಿ ಪೊಲೀಸರು ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಕಾಣೆ, ವ್ಯಕ್ತಿ ಕಾಣೆಯಂಥ ಪ್ರಕರಣಕಗಳನ್ನು ಬೇಧಿಸಿದ್ದು ಒಟ್ಟು ಬೆಳಗಾವಿಯ 12 ಠಾಣೆಗಳಲ್ಲಿ ದಾಖಲಾಗಿದ್ದ 12 ಪ್ರಕರಣಗಳನ್ನು ಭೇದಿಸಿ ಕಾಣೆಯಾಗಿದ್ದ ವ್ಯಕ್ತಿಗಳನ್ನು ಅವರ ಕುಟುಂಬಗಳಿಗೆ ಮರಳಿಸಿದ್ದಾರೆ.AI ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಣೆಯಾಗಿದ್ದವರನ್ನು ಹುಡುಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಮಹಾರಾಷ್ಟ್ರದ ಬೀಡ್ ಹಾಗೂ ರಾಯಘಡ,ಸಾಂಗ್ಲಿ, ಗುಜರಾತ್ ರಾಜ್ಯದ ಆನಂದ ನಗರ, ಗೋವಾ ಮತ್ತು ಕರ್ನಾಟಕ ರಾಜ್ಯದ ಬೆಂಗಳೂರು,ವಿಜಯಪುರ, ಯರಗಟ್ಟಿ ಪಟ್ಟಣದಲ್ಲಿ ವಾಸಿಸುತ್ತಿದ್ದವರನ್ನು ಕರೆತಂದು ಅವರ ಕುಟುಂಬಗಳಿಗೆ ಪೊಲೀಸರು ಒಪ್ಪಿಸಿದ್ದಾರೆ. ಹಲವು ವರ್ಷಗಳಿಂದ ಕಾಣೆಯಾದ ವ್ಯಕ್ತಿಗಳು ಸಿಗದೇ ಇರುವುದರಿಂದ ಕೆಲವು ಪ್ರಕರಣಗಳನ್ನು ಪೊಲೀಸರೇ ಸಿ ರಿಪೋರ್ಟ್ ಹಾಕಿದ್ದರು. ಆದರೆ ಸಮಾಜಿಕ ಜಾಲತಾಣ ಹಾಗೂ ‌ಅತ್ಯಾಧುನಿಕ AI ತಂತ್ರಜ್ಞಾನ ಬಳಸಿ ಕಾಣೆಯಾಗಿದ್ದ ಮಹಿಳೆಯರು, ವೃದ್ದರು ಯುವಕರನ್ನು ಅವರ ಕುಟುಂಬದವರಿಗೆ ಒಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿಯ 12 ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಬೇಧಿಸಿದ ಇಲಾಖೆಯ ಪೊಲೀಸರಿಗೆ ಪೊಲೀಸ್ ಹಿರಿಯ ಅಧಿಕಾರಿಗಳು ಶ್ಲಾಘೀಸಿದ್ದಾರೆ.

TV24 News Desk
the authorTV24 News Desk

Leave a Reply