

ಬೆಳಗಾವಿ:
ಲಗೇಜ್ ಟಿಕೇಟ್ ಮಾಡುವ ವಿಚಾರಕ್ಕೆ ಪ್ರಯಾಣಿ ಮತ್ತು ನಿರ್ವಾಹಕನ ಮದ್ಯೆ ಗಲಾಟೆ ನಡೆದ ಘಟನೆ ಬೆಳಗಾವಿಯ ರಾಯಭಾಗ ಪಟ್ಟಣದಲ್ಲಿ ನಡೆದಿದೆ. ಚಿಕ್ಕೋಡಿಯಿಂದ ರಾಯಭಾಗ ಮಾರ್ಗವಾಗಿ ಗುಲ್ಬರ್ಗಾಕ್ಕೆ ತೆರಳುವ ಬಸ್ಸಿನಲ್ಲಿ ಈ ಘಟನೆ ನಡೆದಿದ್ದು ಟಿಕೇಟ್ ಲಗೇಜ್ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದೆ. ಎನ್ನಲಾಗಿದೆ. ಬಸ್ಸಿನಲ್ಲಿ ಪ್ರಯಾಣಿಕನೋರ್ವ ಲಗೇಜ್ ಸಮೇತ ಏರಿದ್ದ ಎನ್ನಲಾಗಿದೆ. ಈ ವೇಳೆ ನಿರ್ವಾಹಕ ಲಗೇಜ್ ಗೆ ಟಿಕೇಟ್ ನೀಡಲು ಮುಂದಾಗಿದ್ದಾರೆ.ಆದರೆ ಟಿಕೇಟ್ ಪಡೆಯಲು ಪ್ರಯಾಣಿಕ ನಿರಾಕರಿಸಿದ್ದರಿಂದ ಗಲಾಟೆ ನಡೆದಿದೆ ಎನ್ನಲಾಗಿದೆ.ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಬಸ್ಸು ರಾಯಭಾಗ ತಲುಪುತಿದ್ದಂತೆ ಪ್ರಯಾಣಿಕ ತಮ್ಮವರಿಗೆ ಫೋನ್ ಮಾಡಿ ಬಸ್ಸ್ ನಿಲ್ದಾಣಕ್ಕೆ ಕರೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬಸ್ ನಿಲ್ದಾಣಕ್ಕೆ ಆಗಮಿಸಿದ ಕೆಲವರು ಕಂಡೆಕ್ಟರ್ ನನ್ನು ಎಳೆದಾಡಿದ ವಿಡಿಯೋ ಸಹ ವೈರಲ್ ಆಗಿದೆ. ನಂತರ ಕಂಡೆಕ್ಟರ್ ಅವರನ್ನು ಪೊಲೀಸರು ಕರೆದುಕೊಂಡು ಹೋಗಿ ಇಬ್ಬರಿಗೂ ತಿಳಿ ಹೇಳಿ ಕಳಿಸಿದ್ದಾರೆಂದು ತಿಳಿದು ಬಂದಿದೆ. ಈ ಪ್ರಕರಕಣಕ್ಕೆ ಸಂಬಂಧಿಸಿದಂತೆ ಯಾರಿಂದಲೂ ಸಹ ದೂರು ದಾಖಲಾಗಿಲ್ಲ.










