Uncategorized

ದೇವಸ್ಥಾನಗಳಿಗೆ ಕನ್ನ ಹಾಕ್ತಿದ್ದ ಖದೀಮರ ಬಂಧನ!ಚಿನ್ನಾಭರಣ ವಶಕ್ಕೆ!

ಬೆಳಗಾವಿ:

ಬೆಳಗಾವಿಯಲ್ಲಿ ದೇವಾಲಯಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡೋ ಗ್ಯಾಂಗ್ ಅರೆಸ್ಟ್ ಆಗಿದೆ.
ಬೆಳಗಾವಿ ಜಿಲ್ಲೆಯ ಹಾರೋಗೆರಿ ಪೊಲೀಸರು ಖದೀಮರನ್ನು ಅರೆಸ್ಟ್ ಮಾಡಲಾಗಿದ್ದು ಅಥಣಿ, ರಾಯಬಾಗ ತಾಲೂಕಿನಲ್ಲಿ 7 ಕಡೆಗಳಲ್ಲಿ ಕಳ್ಳತನ ನಡೆದಿತ್ತು.ಆರು ದೇವಾಲಯ ಹಾಗೂ ಒಂದು ಮಸೀದಿಯಲ್ಲಿ ಕಳ್ಳತನ ನಡೆದಿತ್ತು.ಸದ್ಯ ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು ಖದೀಮರಿಂದ 25 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಳ್ಳತನ ನಡೆದು ಅನೇಕ ತಿಂಗಳು ಕಳೆದ್ರು ಪತ್ತೆ ಆಗದ ಪ್ರಕರಣಗಳನ್ನು ಕಳವು ಮಾಡಿದ ವಸ್ತುಗಳ ಮಾರಾಟಕ್ಕೆ ಮುಂದಾಗಿದ್ದ ವೇಳೆ ಪತ್ತೆಯಾಗಿವೆ. ಹಾರೋಗೆರಿ ಪಿಎಸ್ಐ ಮಾಳಪ್ಪ ಪೂಜಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು
ಒಂದೇ ಗ್ರಾಮದ ನಾಲ್ಕರು ಆರೋಪಿಗಳನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ‌.ಅಥಣಿ ತಾಲೂಕಿನ ಅಡಳಹಟ್ಟಿ ಗ್ರಾಮದ ಆರೋಪಿಗಳಾದ ವಿಜಯ ಗುಡದಿನ್ನಿ, ಕಲ್ಮೇಶ ಮೂರಾಬಟ್ಟಿ, ಶಿವಾನಂದ ಚಿಕ್ಕಟ್ಟಿ ಹಾಗೂ ಸಂಗಮೇಶ ಐನಾಪುರ ಅರೆಸ್ಟ್ ಆಗಿದ್ದಾರೆ.ಹಣಮಂತ ದೇವಾಲಯ, ಲಕ್ಷ್ಮೀ ದೇವಾಲಯ, ಬೀರೇಶ್ವರ ದೇವಾಲಯ,ರಾಣಮ್ಮ ದೇವಿ, ಸಿದ್ದರಾಯ ದೇವಾಲಯ , ಅಂಬಾ ಭವಾನಿ ಹಾಗೂ ಮಸರಗುಪ್ಪಿ ದರ್ಗಾದಲ್ಲಿ ಖದೀಮರು ಕಳ್ಳತನ ಮಾಡಿದ್ದರು ಎನ್ನಲಾಗಿದೆ.
ಸದ್ಯ ಖದೀಮರ ಬಂಧಿಸಿರುವ ಪೊಲೀಸರು ದೇವಾಲಯಗಳ ವಿವಿಧ ಆಭರಣಗಳು ಪೊಲೀಸರು ವಶಕ್ಕೆ ಪಡೆದಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!