

ಬೆಳಗಾವಿ:
ಒಂದು ಬೈಕ್ ಕಳವು ಕೇಸ್ ಬೆನ್ನತ್ತಿದ್ದ ಪೊಲೀಸರಿಗೆ ಬರೊಬ್ಬರಿ 20 ಬೈಕ್ ಎಗರಿಸಿದ್ದ ಭೂಪ ಸಿಕ್ಕಿಬಿದ್ದಿದ್ದಾನೆ.ಬೈಕ್ ಕದ್ದು ಮನೆ ಪಕ್ಕವೇ ಇಟ್ಟುಕೊಂಡಿದ್ದ ಖದೀಮನನ್ನು ಕುಡಚಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಲಗೌಡ ಅಣ್ಣಾಸಾಹೇಬ್ ಪಾಟೀಲ್(38)ಎಂದು ಗುರುತಿಸಲಾಗಿದೆ.ಖದೀಮ ಮಲಗೌಡ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಜಾತ್ರೆಯಲ್ಲಿ ಬೈಕ್ ಅನ್ನು ಕದ್ದಿದ್ದ ಎನ್ನಲಾಗಿದೆ. ತಕ್ಷಣವೇ ಬೈಕ್ ಕಳೆದುಕೊಂಡ ಪುಷ್ಪಾ ಮಹಾದೇವ್ ನಂದಕೂರ ಎನ್ನುವವರು ಕುಡಚಿ ಠಾಣೆಗೆ ದೂರು ನೀಡಿದ್ದರು.ದೂರು ಪಡೆದು ಆರೋಪಿಯ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದರು.ಚಿಂಚಲಿ ಪಟ್ಟಣದ ಬಳಿ ಬೈಕ್ ನಡೆಸಿಕೊಂಡು ಹೋಗಿತ್ತಿದ್ದ ಖದೀಮ ಮಲಗೌಡನನ್ನು ಕಂಡು ಸಂಶಯ ಬಂದು ಮಲಗೌಡನನ್ನು ಪೊಲೀಸರು ವಿಚಾರಣೆ ನಡೆಸಿದ್ದರು.ವಿಚಾರಣೆಯಲ್ಲಿ ಸಮಂಜಸ ಉತ್ತರ ನೀಡದ್ದಕ್ಕಾಗಿ ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.ಪೊಲೀಸರ ತನಿಖೆಯಲ್ಲಿ ಕದ್ದಿದ್ದ ಅಷ್ಟು ಬೈಕುಗಳ ಕುರಿತು ಖದೀಮ ಮಲಗೌಡ ಮಾಹಿತಿ ನೀಡಿದ್ದ ಸದ್ಯ ಖದೀಮನಿಂದ ಒಟ್ಟು 5,75000 ಮೌಲ್ಯದ ಬೈಕ್ ವಶಕ್ಕೆ ಪಡೆದ ಪೊಲೀಸರು ಒಟ್ಟು 20 ವಿವಿಧ ಕಂಪನಿಯ ಬೈಕುಗಳನ್ನು ವಶಕ್ಕೆ ಪಡೆದಿದ್ದಾರೆ.ಈ ಕುರಿತು ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









