


ಬೆಳಗಾವಿ:
ವಿವಾಹಿತೆಯನ್ನ ಓಡಿಸಿಕೊಂಡು ಹೋದ ಯುವಕನ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ
ಕುಕೃತ್ಯ ಎಸಗಿದ್ದ ಪ್ರಮುಖ ಮೂವರು ಆರೋಪಿಗಳು ಅರೇಸ್ಟ್ ಆಗಿದ್ದಾರೆ.ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರಿಂದ ಆರೋಪಿಗಳ ಬಂಧನವಾಗಿದ್ದು ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ಮನೆಯನ್ನು ಧ್ವಂಸ ಮಾಡಿ ಆರೋಪಿಗಳು ಪರಾರಿಯಾಗಿದ್ದರು.ವಿವಾಹಿತೆ ನಾಗವ್ವಳನ್ನ ಓಡಿಸಿಕೊಂಡು ಹೋಗಿದ್ದ ಯಲ್ಲಪ್ಪ ನಾಯಕ್ ಮನೆ ಮೇಲೆ ದಾಳಿ ಮಾಡಲಾದ ಪ್ರಕರಣ್ಕಕ್ಕೆ ಸಂಬಂಧಸಿದಂತೆ
ದಾಳಿಯ ಪ್ರಮುಖ ಆರೋಪಿಗಳಾದ ನಾಗರಾಜ್ ನಾಯಕ, ರವಿ ಬೀಜಗತ್ತಿ, ಈಶ್ವರ ಮುಚ್ಚಂಡಿ ಬಂಧಿಸಲಾಗಿದೆ. ಮೂರು ಆರೋಪಿ ಸೇರಿ ಹಲವರ ವಿರುದ್ಧ ಯಲ್ಲಪ್ಪ ತಂದೆಯಿಂದ ಕೇಸ್ ದಾಖಲಾದ ಹಿನ್ನೆಲೆ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಮೂವರು ಆರೋಪಿಗಳು ನಾಗವ್ವ ಮತ್ತು ಪತಿ ಬಸಪ್ಪ ಸಂಬಂಧಿಕರೇ ಎಂದು ತಿಳಿದು ಬಂದಿದ್ದು ಈ ಕುರಿತು ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.








