ಬೆಳಗಾವಿಬೆಳಗಾವಿ ನಗರ

ಆಕಸ್ಮಿಕ ಬೆಂಕಿ 40 ಲಕ್ಷ ಮೌಲ್ಯದ ಆಸ್ತಿ-ಪಾಸ್ತಿಗೆ ಹಾನಿ  

ಬೆಳಗಾವಿ:  ನಗರದ ಶೆಟ್ಟಿ ಗಲ್ಲಿಯಲ್ಲಿಯ ಮನೆಯೊಂದಕ್ಕೆ ಶಾರ್ಟ ಸಕ್ರ್ರೂಟನಿಂದ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.  ನಗರದ ಶೆಟ್ಟಿ ಗಲ್ಲಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ  ಎರಡು ಮನೆಗಳಲ್ಲಿ 40 ಲಕ್ಷ ಮೌಲ್ಯದ ಆಸ್ತಿ-ಪಾಸ್ತಿಗೆ ಹಾನಿ ಸಂಭವಿಸಿದೆ. ಇಂದು ಮುಂಜಾನೆ 11.45 ಗಂಟೆಗೆ ಸಂಭವಿಸಿದ ಬೆಂಕಿ ಘಟನೆಯ ಸ್ಥಳಕ್ಕೆ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಭೇಟಿ ನೀಡಿ ಅಗ್ನಿ ದುರಂತದಲ್ಲಿ ಮನೆಯ ದಾಖಲೆಗಳು, ಮಕ್ಕಳ ಶೈಕ್ಷಣಿಕ ದಾಖಲೆಗಳು ಸೇರಿದಂತೆ ಹಲವು ಪ್ರಮುಖ ಮೌಲ್ಯದ ವಸ್ತುಗಳು ಸುಟ್ಟು ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಾನು ಸರ್ಕಾದಿಂದ ಬರುವ ಎಲ್ಲಾ ತರಹದ ಪರಿಹಾರವನ್ನು ಪ್ರಾಮಾಣಿಕವಾಗಿ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದರು. ಈ ವೇಳೆಯಲ್ಲಿ ಬೆಳಗಾವಿ ತಹಶಿಲ್ದಾರರೂ ಕೂಡಾ ಹಾಜರಿದ್ದು ಈ ಬೆಂಕಿ ಅವಘಡಕ್ಕೆ ಸಂಭವಿಸಿದ ಬಗ್ಗೆ ಮಾಹಿತಿ ಪಡೆದುಕೊಂಡು ಸರ್ಕಾರದ ವತಿಯಿಂದ ಕೋಡಲಾಗುವು ಎಲ್ಲಾ ಸೌಲಭ್ಯಗಳನ್ನು ಕೋಡಸುತ್ತೇನೆ ಎಂದು ಭರವಸೆ ನೀಡಿದರು. ಹಾಗೂ ಶೆಟ್ಟಿ ಗಲ್ಲಿಯ ನಡೆದ ಈ ದುರ್ಘಟನೆ ಯಲ್ಲಿ ಯಾರ ಜೀವಕ್ಕೂ ಹಾನಿ ಸಂಭವಿಸಿಲ್ಲಾ, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವುಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ನಗರ ಸೇವಕರಾದ ಮುಜಾಮಿಲ್ ದೋಣಿ, ಶಖೀಲ್ ಮುಲ್ಲಾ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.ಬೆಳಗಾವಿ ನಗರದ ಶೆಟ್ಟಿ ಗಲ್ಲಿಯಲ್ಲಿ ನಡೆದ ಹಿನ್ನಲೆ  ಈ ಮನೆಯಲ್ಲಿ ಎರಡು ಕುಟುಂಬಗಳ ಸದಸ್ಯರು ವಾಸವಾಗಿದ್ದರು, ಸುಮಾರು 40 ಲಕ್ಷಕಿಂತ ಅಧಿಕ ಮೌಲ್ಯದ ಆಸ್ತಿ ಪಾಸ್ತಿಗೆ ಹಾನಿಯಾಗಿದೆ ಎಂದು ಮನೆಯ ನಿವಾಸಿಯಾದ ಪರಶುರಾಮ ಕಿಲ್ಲೇಕರ್ ಅಳಲುತೋಡಕೊಂಡರು.
TV24 News Desk
the authorTV24 News Desk

Leave a Reply