ಬೆಳಗಾವಿ:
ಕರ್ನಾಟಕ ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಮಳೆ ಆರ್ಭಟ ಮುಂದುವರೆದಿದ್ದು ಕ್ಷಣ ಕ್ಷಣಕ್ಕೂ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಒಳ ಹರಿವು ಹೆಚ್ಚಾಗುತ್ತಿದೆ.ಸದ್ಯ 1 ಲಕ್ಷ ಗಡಿಯನ್ನು ಕೃಷ್ಣಾ ನದಿಯ ಒಳಹರಿವು ತಲುಪಿದ್ದು ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಬಳಿ 99 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದೆ.ಇತ್ತ ಘಟಪ್ರಭಾ ನದಿಯ ಒಳಹರಿವು 22000 ಸಾವಿರ ಕ್ಯೂಸೆಕ್ ಗೆ ಏರಿಕೆಯಾಗಿದ್ದು ಇನ್ನೂ ಮಲಪ್ರಭಾ ನದಿಯ ಒಳಹರಿವು 5 ಸಾವಿರ ಕ್ಯೂಸೆಕ್ ಗೆ ಏರಿಕೆಯಾಗಿದೆ.ಒಂದೇ ರಾತ್ರಿಯಲ್ಲಿ ಮೂರು ಪ್ರಮುಖ ನದಿಗಳ ಒಳಹರಿವು ಹೆಚ್ಚಳವಾಗಿದ್ದು ಹಿಡಕಲ್ ಜಲಾಶಯ ಹಾಗೂ ನವೀಲ್ ತೀರ್ಥ ಜಲಾಶಯದಲ್ಲಿ ನೀರನ ಸಂಗ್ರಹ ಮಟ್ಟ ಏರಿಕೆಯಾಗಿದೆ. ಇನ್ನೂ ಮಳೆ ಮುಂದುವರೆಯುವ ಸಾಧ್ಯತೆ ಇದ್ದು ಜನರಿಗೆ ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚಿಸಿದೆ.
ಧಾರಾಕಾರ ಮಳೆಯಿಂದಾಗಿ ಖಾನಾಪುರದ 13 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಂಪರ್ಕ ಸೇತುವೆ ಮುಳುಗಡೆಯಾಗಿದೆ.
ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ಅದಕ್ಕೆ ಅಡ್ಡಲಾಗಿ ನಿರ್ಮಸಿದ್ದ ಹಾಲಾತ್ರಿ ಸೇತುವೆ ಮುಳುಗಡೆಯಾಗಿದೆ.
ಸೇತುವೆ ಮುಳುಗಡೆಯಾಗಿದ್ದರಿಂದ ಸದ್ಯ ಬೆಳಗಾವಿ ಜಿಲ್ಲೆಯ ಖಾನಾಪುರ-ಹೆಮ್ಮಡಗಾ ಸೇರಿ 13 ಗ್ರಾಮಗಳ ಸಂಪರ್ಕ ಕಡಿತವಾಗಿದೆ.ಖಾನಾಪುರದ ಕಾಡಂಚಿನಲ್ಲಿರುವ ಇರುವ ಹಾಲಾತ್ರಿ ಸೇತುವೆ ಮುಳುಗಡೆಯಾಗಿದ್ದು ಮುಂಜಾಗೃತಾ ಕ್ರಮವಾಗಿ
ಬ್ಯಾರಿಕೇಡ್ ಅಳವಡಿಕೆ ಮಾಡಿ ಆ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.ಸ್ಥಳದಲ್ಲಿ ಖಾನಾಪುರ ಠಾಣೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು ಯಾವುದೇ ಅಹಿತರಕ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ












