ಜಿಲ್ಲೆಬೆಳಗಾವಿ

ಸಾಹೇಬ್ರ ಯಾಕೋ ನಮ್ ಪೆನ್ಷನ್ ರೊಕ್ಕ ಬರವಾಲು ನೋಡ್ರಿ!!

ಬೆಳಗಾವಿ:

ಬೆಳಗಾವಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರ ಪಿಂಚಣಿ ಹಣ ಸ್ಥಗಿತಗೊಂಡ ಆರೋಪ‌ ಕೇಳಿ ಬಂದಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಸೇರಿದಂತೆ ವಿಕಲಚೇತನ ಫಲಾನುಭವಿಗಳು ಕಂಗಾಲಾಗಿದ್ದಾರೆ. ಕಳೆದ ನಾಲ್ಕೈದು ತಿಂಗಳಿನಿಂದ ಪಿಂಚಣಿ ಹಣ ಬಾರದೆ ಫಲಾನುಭವಿಗಳು ಪರದಾಡುತ್ತಿದ್ದಾರೆ. ಪಿಂಚಣಿ ಕೈಗೆ ಸಿಗದೇ ಹಿರಿಯ ಜೀವಗಳು ಪ್ರತಿದಿನ ತಹಶಿಲ್ದಾರ್ ಕಚೇರಿಗೆ ಕಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದೂ ಸಹ ವಿವಿಧ ಫಲಾನುಭವಿಗಳು ಬೆಳಗಾವಿ ತಹಶೀಲ್ದಾರ್ ಕಚೇರಿಯ ಮುಂದೆ ಬಂದು ಪಿಂಚಣಿ ಹಣಕ್ಕಾಗಿ ಕ್ಯೂ ನಿಂತ ದೃಶ್ಯಾವಳಿಗಳು ಕಂಡು ಬಂದಿವೆ. ತಹಶೀಲ್ದಾರ್ ಕಚೇರಿಯಲ್ಲಿ ನೂರಕ್ಕೂ ಹೆಚ್ಚು ಜನ ಕ್ಯೂ ನಲ್ಲಿ ನಿಂತ ದೃಶ್ಯಾವಳಿಗಳು ಕಂಡು ಬಂದಿದ್ದು ಹೆಚ್ಚಿನ ಆದಾಯ ಇದ್ದ ಅರ್ಜಿದಾರರನ್ನು ಕಚೇರಿಯ ಸಿಬ್ಬಂಧಿಗಳೇ ವಾಪಸ್ ಕಳಿಸುತ್ತಿದ್ದಾರೆ. ಹಣದ ಬರುವಿಕೆ ಏಕಾಏಕಿ ಸ್ಥಗಿತವಾಗಿದ್ದರಿಂದ ಕಾರಣ ಕೇಳಲು ಕಚೇರಿಗೆ ಫಲಾನುವಿಗಳು ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಯಾಕಾಗಿ ಹಣ ಬರುತ್ತಿಲ್ಲ ಎಂದು ಜನ ಮಾಹಿತಿ ಪಡೆಯುತ್ತಿದ್ದಾರೆ.‌ಸದ್ಯ ಬೆಳಗಾವಿ ‌ಜಿಲ್ಲೆಯಲ್ಲಾಗಿರುವ ಈ ಸಮಸ್ಯೆಗೆ ಕ್ರಮ ಕೈಗೊಳ್ಳುವಂತೆ ಫಲಾನುಭವಿಗಳು ಆಗ್ರಹಿಸಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!