ಬೆಳಗಾವಿ:
ಗ್ರಾಂ ಪಂಚಾಯ್ತಿಯಲ್ಲಿನ ತಿಜೋರಿ ತೆಗೆದಿದ್ದಕ್ಕಾಗಿ ಅಹೋರಾತ್ರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಅಲ್ಲದೆ ಗ್ರಾಮಸ್ಥರಿಗೆ ಗ್ರಾಮ ಪಂಚಾಯತ್ ಸದಸ್ಯರು ಸಾಥ್ ನೀಡಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಘಟನೆ ನಡೆದಿದ್ದು ಪಂಚಾಯ್ತಿಯಲ್ಲಿ ಅವ್ಯವಹಾರ ನಡೆದಿದ್ದ ಆರೋಪದ ಹಿನ್ನೆಲೆ ತನಿಖೆ ಮುಗಿಯುವವರೆಗೆ ತಿಜೋರಿ ತೆಗೆಯದಂತೆ ಚಿಕ್ಕೋಡಿ ಎಸಿ ಆದೇಶ ನೀಡಿದ್ದರು.ಆದರೆ
ಎಸಿ ಆದೇಶವನ್ನು ಗಾಳಿಗೆ ತೂರಿ ಗ್ರಾಂ ಪಂ ಸಿಬ್ಬಂಧಿ ತಿಜೋರಿ ಓಪನ್ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಗ್ರಾಂ ಸದಸ್ಯೆ ಅನಿತಾ ಬಣಿಗೆ ಹಾಗೂ ಗ್ರಾಮಸ್ಥರಿಂದ ಧರಣಿ ನಡೆಸಿದರು.ತಿಜೋರಿ ಬೀಗ ಯಾಕೆ ತೆಗೆದಿದ್ದಿರಿ ಎಂದು ಗ್ರಾಂ ಪಂ ಸದಸ್ಯೆ ಪ್ರಶ್ನೆ ಮಾಡಿದರು.ಇನ್ನು
ಸ್ಥಳದಲ್ಲಿ ಬಿಗುವಿಣ ವಾತಾವರಣ ಹಿನ್ನೆಲೆ ಸ್ಥಳಕ್ಕೆ ದೌಡಾಯಿಸಿದ ಚಿಕ್ಕೋಡಿ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದರು.
ಆರೋಪದ ಹಿನ್ನೆನೆ ಪ್ರಮುಖ ದಾಖಲೆಗಳನ್ನು ಒಳಗಿಟ್ಟು ಚಿಕ್ಕೋಡಿ ಎಸಿ ಲಾಕ್ ಮಾಡಿಸಿದ್ದರು ಎನ್ನಲಾಗಿದೆ.ನಿನ್ನೆ
ತಡರಾತ್ರಿ ಮತ್ತೆ ತಾಪಂ ಇಒ ನೇತೃತ್ವದಲ್ಲಿ ತಿಜೋರಿ ಲಾಕ್ ಮಾಡಿಸಲಾಗಿದ್ದು ಗ್ರಾಂ ಪಂ ಕಚೇರಿಗೂ ಸೀಲ್ ಹಾಕಲಾಗಿದೆ.ಹೀಗಾಗಿ ಗ್ರಾಮ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.




