ಬೆಳಗಾವಿ:
ಬೆಳಗಾವಿಯಲ್ಲಿ ಕುರಿಗಳ ಮೇಲೆ ವಾಹನ ಹರದು 11 ಕುರಿಗಳು ದಾರುಣವಾಗಿ ಸಾವನ್ನಪ್ಪಿವೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಡ್ಯಾಂ ಹತ್ತಿರ ಘಟನೆ ನಡೆದಿದ್ದು
ಶ್ರೀಕಾಂತ ರತ್ನಾಕರ ಎನ್ನುವವರಿಗೆ ಸೇರಿದ್ದ ಕುರಿಗಳು ತೀರಿ ಹೋಗಿವೆ.
35 ಕುರಿಗಳನ್ನ ಹೊಂದಿದ್ದ ಕುರಿಗಾಹಿ ಶ್ರೀಕಾಂತ ಮುನವಳ್ಳಿ ಪಟ್ಟಣದ ಹತ್ತಿರ ಇರುವ ಏಳುಕೊಳ್ಳದ ಹತ್ತಿರ ಕುರಿಗಳನ್ನು ಮೇಯಿಸಲು ಹೋಗಿದ್ದರು ಎನ್ನಲಾಗಿದೆ.ಕುರಿಗಾಹಿ ತನ್ನ ಕುರಿಗಳನ್ನ ಕರೆದುಕೊಂಡು ಬೇರೆಕಡೆ ಹೋಗುವ ವೇಳೆ ಘಟನೆ ನಡೆದಿದ್ದು ಈ ವೇಳೆ ಏಕಾಏಕಿ ಕುರಿಗಳ ಮೇಲೆ ವಾಹನ ಹಾಯಿಸಿ ವಾಹನ ಚಾಲಕ ಎಸ್ಕೇಪ್ ಆಗಿದ್ದಾನೆ.ನಿನ್ನೆ ಸಂಜೆಯ ಹೊತ್ತಿಗೆ 11 ಕುರಿಗಳು ಮೇಲೆ ವಾಹನ ಹಾಯ್ದು ದಾರುಣ ಸಾವನ್ನಪ್ಪಿವೆ.
35 ಕುರಿಗಳಲ್ಲಿ ತಪ್ಪಿಸಿಕೊಂಡು ರಸ್ತೆಯ ಮೇಲೆ ಹನ್ನೊಂದು ಕುರಿಗಳು ಬಂದಿದ್ದವು ಎನ್ನಲಾಗಿದೆ.
ಕುರಿಗಳು ರಸ್ತೆ ಮೇಲೆ ಬರುತ್ತಿದ್ದ ವೇಳೆ ಅಪರಿಚಿತ ವಾಹನ ಬಂದು ಕುರಿಗಳ ಮೇಲೆ ಹಾದು ಹೋಗಿದೆ.ಸಧ್ಯ ಒಂದೊಂದು ಕುರಿಯ ಬೆಲೆ 12 ಸಾವಿರಷ್ಟಿದ್ದು ಕುರಿಗಾಹಿಗೆ 2 ಲಕ್ಷಕ್ಕಿಂತ ಹೆಚ್ಚು ನಷ್ಟವಾಗಿದೆ.
ಪರಿಹಾರಕ್ಕಾಗಿ ಬಡ ಕುರಿಗಾಹಿ ಮನವಿ ಮಾಡಿದ್ದು ಸ್ಥಳಕ್ಕೆ ದೌಡಾಯಿಸಿದ ಸವದತ್ತಿ ಪೊಲೀಸರಿಂದ ಪರಿಶೀಲನೆ ನಡೆಸಿದ್ದಾರೆ.













