ಬೆಳಗಾವಿ:
ಬೆಳಗಾವಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.ಇಂದು ಸಂಕೇಶ್ವರದಲ್ಲಿ ಮಾಜಿ ಸಚಿವ ಎಬಿ ಪಾಟೀಲ್ ರಮೇಶ ಕತ್ತಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಬಿ ಪಾಟೀಲ್ ಮಾತನಾಡಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಅಪ್ಪಣಗೌಡ್ರು ಅಡಿಗಲ್ಲು ಹಾಕಿದರು.ಎಂಬಿ ಪಾಟೀಲ್ ಎಸ್ ಐ ಪಾಟೀಲ್ ವಿಶ್ವನಾಥ ಕತ್ತಿ ಶ್ರಮ ಪಟ್ಟು ಒಳ್ಳೆಯ ಕಾರ್ಖಾನೆ ಆಯ್ತು.
ನಡುವೆ ಚುನಾವಣೆ ಆಯ್ತು ಕತ್ತಿ ಸಹೋದರರು ಪೆನಲ್ ಗೆದ್ದು ಬಂತು ಅದನ್ನು ನಾವು ಸ್ವಾಗತ ಮಾಡಿದೆವು.ನಂತರದ ದಿನಗಳಲ್ಲಿ ಹಲವಾರು ಬೆಳವಣಿಗೆಗಳು ಆದವು ನಮ್ಮ ಕುಟುಂಬ ಕತ್ತಿ ಕುಟುಂಬ ಒಂದೇ ಆಗಬೇಕು ಎನ್ನುವುದು ಬಹಳ ಜನ ಇಚ್ಚೆ ಇತ್ತು.ಅದು ಫಲಿಸಲಿಲ್ಲ ಸಧ್ಯ ಕಾರ್ಖಾನೆಯ ಡೈರೆಕ್ಟರ್ ಮತ್ತು ಅಧ್ಯಕ್ಷರು ಸೇರಿ ಆಡಳಿತ ನಡೆಸುತ್ತಿದ್ದಾರೆ.ಸಹಕಾರ ತತ್ವದಲ್ಲಿ ಪ್ರಾರಂಭದಲ್ಲಿ ಕಾರ್ಖಾನೆ.
ಇದನ್ನ ಲೀಸ್ ಕೊಡೊದು ಬೇಡ ಸಹಕಾರ ತತ್ವದ ಮೇಲೆ ನಡೆಯಲಿ ಎಂದು ಹೇಳಿದ್ದೆವೆ.ಹಣಕಾಸಿನ ವ್ಯವಸ್ಥೆ ಮಾಡಬೇಕು ತೊಂದರೆ ಇದೆ ಎಂಬ ಪ್ರಶ್ನೆ ಬಂತು.
ಅಣ್ಣಾಸಾಹೇಬ್ ಜೊಲ್ಲೆಯವರಿಗೆ ಅಪ್ರೋಚ್ ಮಾಡಿದ್ದರು.
ಅವರೂ ಸಹ ಸಹಾಯ ಮಾಡ್ತಿನಿ ಎಂದು ಹೇಳಿದರು.ಆದರೆ ಅವರಿಗೂ ನಮ್ಮ ನಿರ್ದೇಶಕರಿಗೆ ಹೊಂದಾಣಿಕೆ ಆಗಲಿಲ್ಲ.
ಅದಕ್ಕೆ ಹಲವಾರು ಕಾರಣಗಳಿವೆ ಅದನ್ನು ವಿಶ್ಲೇಷಣೆ ಮಾಡುವುದು ಸರಿಯಲ್ಲ.ಅವರು ಫೈನಾನ್ಸ್ ಮಾಡಲು ಆಗೊಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದರು.ಎಲ್ಲಾ ನಿರ್ದೇಶಕರು ಈಗ ರಮೇಶ್ ಕತ್ತಿ ಹಾಗೂ ನಿಖಿಲ್ ಹಾಗೂ ನಾನು ಮುಂದಾಳತ್ವ ವಹಿಸಬೇಕು ಎಂದು ಮನವಿ ಮಾಡಿದರು.ಹುಕ್ಕೇರಿ ತಾಲೂಕಿನ ಜನ ಬಿಳಿ ಅಂಗಿ ಹಾಕಿಕೊಂಡು ತಿರುಗಾಡೋಕೆ ಇದೆ ಶುಗರ್ ಪ್ಯಾಕ್ಟರಿಯ ಮೇಲೆಯೇ.
ನಾನು ಉಮೇಶ್ ಕತ್ತಿ, ರಮೇಶ್ ಕತ್ತಿ, ನಿಖಿಲ್ ಕತ್ತಿ ಎಂ ಎಲ್ ಎ ಎಂಪಿ ಆಗಿದ್ದು ಇದೆ ಸಕ್ಕರೆ ಕಾರ್ಖಾನೆಯಿಂದಲೇ.ನಾವೆಲ್ಲರೂ ಒಂದಾಗಬೇಕು ಎಂದು ಎಲ್ಲರೂ ಹೇಳಿದರು.ರಮೇಶ ಹಾಗೂ ನಿಖಿಲ್ ಅವರಿಗೆ ಸ್ಪಷ್ಟವಾಗಿ ಹೇಳಿದೆ. ಮುಂದಾಳತ್ವ ನಾನೇ ವಹಿಸ್ತಿನಿ ಅಂತ ಹೇಳಿದೆ.
ಮೂವತ್ತು ವರ್ಷಗಳಿಂದ ನಾನು ಈ ಕಾರ್ಖಾನೆಗೆ ಕಾಲಿಟ್ಟಿರಲಿಲ್ಲ ಇವತ್ತು ಬಂದಿರುವೆ.ಎಲ್ಲರ ನೇತೃತ್ವದಲ್ಲಿ ನಾವೆಲ್ಲರೂ ಸಹ ಒಂದಾಗಿ ಹೋಗುತ್ತೆವೆ.
ಜೊಲ್ಲೆಯವರಿಗೆ ಎಲ್ಲವನ್ನೂ ನಾವು ಬಗೆಹರಿಸ್ತಿವಿ ಅಂತ ಹೇಳಿ ಬಂದಿದ್ದಿವೆ.ಕಾರ್ಖಾನೆ ಸಹಕಾರಿ ತತ್ವದ ಮೇಲೆಯೇ ನಡೆಯಬೇಕು.
ಕಾರ್ಮಿಕರ ಹಿತವನ್ನು ಕಾಪಾಡಬೇಕು.ಈ ಕಾರ್ಖಾನೆ ಅಭಿವೃದ್ದಿ ಮಾಡಿಯೇ ಮಾಡ್ತಿವಿ ಎಂದು ಎಬಿ ಪಾಟೀಲ್ ಹೇಳಿದರು
ಇನ್ನು ಹೊರಗಿನವರಿಗೆ ಬರಲು ಅವಕಾಶ ನೀಡಲ್ಲ ಎಂಬ ರಮೇಶ ಕತ್ತಿ ಹೇಳಿಕೆ ವಿಚಾರಕ್ಕೆ
ಇದು ಕೇವಲ ಶುಗರ್ ಫ್ಯಾಕ್ಟರಿಗೆ ಮಾತ್ರ ಸೀಮಿತ ಎಂದು ಎಬಿ ಪಾಟೀಲ್ ಹೇಳಿದರು.ಪೂರ್ಣ ಅಧಿಕಾರ ಇರೋದು ನಿರ್ದೇಶಕರು ಹಾಗೂ ಅಧ್ಯಕ್ಷರಿಗೆ.
ನಾವೆಲ್ಲರೂ ಸಹ ಒಂದೇ ಚುನಾವಣೆ ಬಂದಾಗ ಮುಂದಿಂದು ನೋಡೊಣ ನಮ್ಮ ಮೇಲೆ ವಿಶ್ವಾವಿಡಿ ಇಲ್ಲಿಯವರೆಗೂ ನಾನು ಯಾರಿಗೂ ಮೋಸ ಮಾಡಿಲ್ಲ ಎಂದ ಅವರು ಕಾರ್ಮಿಕರ ಸಮಸ್ಯೆಯನ್ನು ಕೇಳುತ್ತೆವೆ ಆಡಳಿತ ಮಂಡಳಿಯ ಸಮಸ್ಯೆಯನ್ನೂ ಕೇಳುತ್ತೆವೆ.ಹಣಕಾಸಿನ ವಿಚಾರ ಕೇಳಬೇಡಿ ಎಲ್ಲಿಂದಾದರೂ ನಾವು ಹಣ ತರುತ್ತೆವೆ ಎಂದು ಎಬಿ ಪಾಟೀಲ್ ಹೇಳಿದರು.
ಎಲ್ಲರ ಸಹಾಯ ಸಹಕಾರ ಬೇಕು ಎಂದ ಎಬಿ ಪಾಟೀಲ್.
10 ಲಕ್ಷ ಟನ್ ಕ್ರಸಿಂಗ್ ಮಾಡಬೇಕು ಎಂಬ ಕನಸಿದೆ.
ಅದನ್ನು ಮಾಡಿಯೇ ಮಾಡುತ್ತೆವೆ ಎಂದ ಎಬಿ ಪಾಟೀಲ್.
ತಪ್ಪುಗಳಾಗಿವೆ ಅದನ್ನ ತಿದ್ದಿಕೊಳ್ಳುತ್ತೆವೆ.
ಭಿನ್ನಾಭಿಪ್ರಾಯ ಜೊಲ್ಲೆಯವರಿಗೆ ನಿರ್ದೇಶಕರಿಗೂ ಬಂದಿದೆ.
ಜೊಲ್ಲೆಯವರೂ 100 ಕೋಟಿ ಹಾಕಿದ್ದಾರೆ.
ವಿದ್ಯುತ್ ಸಹಕಾರಿ ಸಂಘಕ್ಕೂ ಇದೆ ಒಕ್ಕಟ್ಟು ಮುಂದುವರೆಯುತ್ತಾ ಎಂಬ ಪ್ರಶ್ನೆ.
ಆಗಲೂ ಸಹ ನಾವು ನಿಮ್ಮನ್ನು ಕರೆದು ಚರ್ಚೆ ಮಾಡಿ ಹೇಳುತ್ತೆವೆ ಎಂದು ಎಬಿ ಪಾಟೀಲ್ ಹೇಳಿದರು
ಪಕ್ಷ ಬಂದಾಗ ನಾವು ಬೇರೆ ಬೇರೆ ಅದರೆ ಸಹಕಾರಿ ಕ್ಷೇತ್ರದಲ್ಲಿ ನಾವು ಒಂದೇ ಎಂದು ಎ ಬಿ ಪಾಟೀಲ್ ಹೇಳಿದರು.ಎಬಿ ಪಾಟೀಲ್ ಅವರ ನಂತೆ ಮಾತನಾಡಿದ ಮಾಜಿ ಸಂಸದ ರಮೇಶ್ ಕತ್ತಿ ರಾಜಕೀಯ ಕ್ಷೇತ್ರ ಬೇರೆ ಸಹಕಾರಿ ಕ್ಷೇತ್ರ ಬೇರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ನಾನು 40 ವರ್ಷ ಕೆಲಸ ಮಾಡಿದ್ದೆನೆ
ಸಹಕಾರಿ ಕ್ಷೇತ್ರ ಪಕ್ಷಾತೀತ ಕ್ಷೇತ್ರ ಎಂದು ರಮೇಶ ಕತ್ತಿ ಹೇಳಿದರು.
ಪಕ್ಷಾತೀತವಾಗಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ್ತಿವಿ ಎಂದ ರಮೇಶ ಕತ್ತಿ
ಕೊಟ್ಟಂತ ಮಾತಿಗೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೆವೆ.
ನಾನು ಬಿಜೆಪಿಯಲ್ಲಿದ್ದೆನೆ ಎಬಿ ಪಾಟೀಲ್ ಕಾಂಗ್ರೇಸ್ ನಲ್ಲಿದ್ದಾರೆ.
ಪಕ್ಷ ಅಂತ ಬಂದಾಗ ನಮ್ಮ ಝೇಂಡಾ ನಾವ್ ತೆಗೆದುಕೊಂಡು ಓಡಾಡ್ತಿವಿ ಅವರ ಪಕ್ಷದ ಝೇಂಡಾ ಅವರು ತೆಗೆದುಕೊಂಡು ಓಡಾಡುತ್ತಾರೆ ಎಂದು ರಮೇಶ ಹೇಳಿದರು.ಸಂಸ್ಥೆಯನ್ನು ಚನ್ನಾಗಿ ನಡೆಸಿಕೊಂಡು ಹೋಗಬೇಕು ಎನ್ನುವುದು ನಮ್ಮ ಉದ್ದೇಶವಿದೆ.
ಹಣವನ್ನು ಯಾವ್ಯಾವ ಮೂಲದಿಂದ ತರಬೇಕು ಎನ್ನುವುದನ್ನು ಚರ್ಚೆ ಮಾಡ್ತಿವಿ ಎಲ್ಲರ ಹಿತವನ್ನು ಕಾಪಾಡುತ್ತೆವೆ ಎಂದು ರಮೇಶ ಕತ್ತಿ ಹೇಳಿದರು.


