ಬೆಳಗಾವಿ:
ನದಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಹೊರವಲಯದ ಕಂಗ್ರಾಳಿ ಬಳಿ ನಡೆದಿದೆ. ಕಂಗ್ರಾಳಿ ಗ್ರಾಮದ ಬಳಿ ಹರಿದಿರುವ ಮಾರ್ಕಂಡೇಯ ನದಿಗೆ ಹಾರಿ ಸಚಿನ್ ಮಾನೆ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ನದಿಗೆ ಹಾರುವ ಮುನ್ನ ಸಚಿನ್ ಕುಡಿದ ಅಮಲಿನಲ್ಲಿದ್ದ ಎನ್ನಲಾಗಿದ್ದು ಸ್ಥಳದಲ್ಲಿ ಮಧ್ಯ ಹಾಗೂ ನೀರಿನ ಬಾಟಲಿ ಹಾಗೂ ಸ್ನ್ಯಾಕ್ಸ್ ಪತ್ತೆಯಾಗಿವೆ.ನದಿಗೆ ಹಾರುವ ಮುನ್ನ ವ್ಯಕ್ತಿಯೋರ್ವನಿಗೆ ಸಚಿನ್ ಕಾಲ್ ಮಾಡಿದ್ದ ಎನ್ನಲಾಗಿದೆ. ಸ್ಥಳೀಯ ಯುವಕನ ಮೊಬೈಲ್ ಪಡೆದು ಬೇರೊಬ್ಬರಿಗೆ ಕರೆ ಮಾಡಿ ನದಿಗೆ ಹಾರಿದ್ದಾನೆ ಎನ್ನಲಾಗಿದೆ. ಸಚಿನ್ ನದಿಗೆ ಹಾರುತ್ತಿದ್ದಂತೆ ಸ್ಥಳೀಯ ಯುವಕರು ಆತನ ರಕ್ಷಣೆಗೆ ದಾವಿಸಿದ್ದಾರೆ. ರಕ್ಷಣೆಗಾಗಿ ಪ್ಲಾಸ್ಟಿಕ್ ಎಸೆದರೂ ಸಹ ಅದನ್ನು ಹಿಡಿದುಕೊಳ್ಳದೆ ನದಿಯಲ್ಲಿ ಸಚಿನ್ ತೇಲಿ ಹೋಗಿದ್ದಾಗಿ ಪ್ರತ್ಯೇಕ್ಷದರ್ಶಿಗಳು ಹೇಳಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನೀರಲ್ಲಿ ಕಣ್ಮರೆಯಾಗಿರುವ ಸಚಿನ್ ಗಾಗಿ ಹುಡುಕಾಟ ನಡೆಸಿದ್ದಾರೆ.

