ಜಿಲ್ಲೆಬೆಳಗಾವಿ

ಇಂಥಾ ಪಂಚಾಯ್ತಿ ಮೆಂಬರ್ ನಿಮ್ಮಲ್ಲ್ಯೂ ಅದಾರೇನ್ ಒಂದ್ಸಲ್ ಚಕ್ ಮಾಡ್ಕೋರಿಪಾ

ಬೆಳಗಾವಿ:

ಚಕ್ ಬುಕ್ ಮೇಲೆ ನಕಲಿ ಸಹಿ ಮಾಡಿ ಗ್ರಾಂ ಪಂ‌ ಸದಸ್ಯನೋರ್ವ ಲಕ್ಷ ಲಕ್ಷ ಗುಳುಂ ಮಾಡಿರುವ ಆರೋಪ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ಕೇಳಿ ಬಂದಿದೆ. ಗ್ರಾಂ ಪಂಚಾಯತ ಸದಸ್ಯನ ಕಳ್ಳಾಟಕ್ಕೆ ಹಲವರು ಸಾಥ್ ನೀಡಿರುವ ಆರೋಪವೂ ಸಹ ಕೇಳಿ ಬಂದಿದೆ. ಗ್ರಾಮ ವಿಕಾಸ ಯೋಜನೆಯಡಿ ಅಕೌಂಟ್ ನಲ್ಲಿದ್ದ ಲಕ್ಷ ಲಕ್ಷ ಹಣವನ್ನು ನಕಲಿ ಸಹಿ ಮಾಡಿ ಗ್ರಾಮ ಪಂಚಾಯತ್ ಸದಸ್ಯ ಶ್ರೀಕಾಂತ್ ಕೊರವರ್ ತೆಗೆದುಕೊಂಡಿದ್ದಾನೆ ಎಂಬ ಆರೋಪ‌ ಕೇಳಿ ಬಂದಿದೆ. ಖಾತೆಯಲ್ಲಿದ್ದ 31.84 ಲಕ್ಷ ರೂಪಾಯಿ ಹಣ ದುರುಪಯೋಗವಾದ ಆರೋಪ‌ ಕೇಳಿ ಬಂದಿದೆ. ಗ್ರಾಂ ಪಂ ಸದಸ್ಯ ಶ್ರೀಕಾಂತ್ ಗೆ ಡಾಟಾ ಎಂಟ್ರಿ ಆಪರೇಟರ್ ಸಹ ಸಾಥ್ ನೀಡಿರುವ ಆರೋಪ‌ ಕೇಳಿ ಬಂದಿದೆ. ಬರೊಬ್ಬರಿ 12 ಚೆಕ್ ಗಳ ಮೇಲೆ ನಕಲಿ ಸಹಿ ಮಾಡಿ ಹಣ ಡ್ರಾ ಮಾಡಲಾಗಿದೆ. ವಿಷಯ ಹೊತ್ತಾದ ಬಳಿಕ‌ ಗ್ರಾಮದಲ್ಲಿಯೇ ರಾಜೀ ಪಂಚಾಯ್ತಿ ಮಾಡಿ ಗ್ರಾಮಸ್ಥರು ವಿಷಯವನ್ನು ಮುಗಿಸಿದ್ದಾರೆ. ಈ ವೇಳೆ ನಾನೇ ಹಣ ದುರ್ಬಗಳಕೆ ಮಾಡಿಕೊಂಡಿದ್ದೆನೆ ಅಂತ ಗ್ರಾಮ ಪಂಚಾಯತಿ ಸದಸ್ಯ ಶ್ರೀಕಾಂತ್ ತಪ್ಪೊಪ್ಪಿಗೆ ಪತ್ರವನ್ನೂ ಸಹ ಪಿಡಿಒಗೆ ಬರೆದು ಕೊಟ್ಟಿದ್ದಾನೆ. ಅಲ್ಲದೆ ಹಣ ಮರುಕಳಿಸಲು ಮೂರು ತಿಂಗಳ ಕಾಲಾವಕಾಶ ನೀಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದಾನೆ. ಸಧ್ಯ ಮೂರು ತಿಂಗಳು ಮುಗಿದರೂ ಸಹ ಶ್ರೀಕಾಂತ ಇನ್ನೂ ಹಣವನ್ನು ಗ್ರಾಂ ಪಂಗೆ ಮರಳಿ ನೀಡಿಲ್ಲ ಎನ್ನಲಾಗಿದೆ. ಇತ್ತ ಹಣ ಲಪಟಾಯಿಸಿ ಹಣವನ್ನೂ ವಾಪಸ್ ನೀಡದ ಸದಸ್ಯ ಶ್ರೀಕಾಂತ್ ವಿರುದ್ಧ ಗ್ರಾಂ ಪಂಚಾಯತ್ ಪಿಡಿಒ ಆಗಲಿ ಅಥವಾ ಅಧ್ಯಕ್ಷರಾಗಲಿ ದೂರು ನೀಡಿಲ್ಲ. ಹೀಗಾಗಿ ಈ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿದೆ.ಇನ್ನಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಯಳು ಕಟಕೋಳ ಗ್ರಾಮದತ್ತ ಕಣ್ಣು ಹಾಯಿಸಲಿ ಎನ್ನುತ್ತಿದ್ದಾರೆ ಸಾರ್ವಜನಿಕರು.

TV24 News Desk
the authorTV24 News Desk

Leave a Reply