ಬೆಳಗಾವಿ:
ಬೆಳಗಾವಿಯ ಖಡೇಬಜಾರ್ ಹಾಗೂ ಮಾರ್ಕೇಟ್ ಠಾಣೆಯ ಪೊಲೀಸರು ನಗರದಲ್ಲಿ ಹೆರಾಯಿನ್ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ತಾಂಗಡಿ ಗಲ್ಲಿಯಲ್ಲಿ ಹೆರಾಯಿನ್ ಮಾರಾಟದಲ್ಲಿ ತೊಡಗಿದ್ದ ವಿಶ್ವನಾಥ ಗೋಡಡಕಿ ಹಾಗೂ ಮಯೂರ್ ರಾವುತ್ ಎಂಬಾತರನ್ನು ಬಂಧಿಸಿ ಅವರಿಂದ 14.63 ಗ್ರಾಂ ತೂಕದ 33,000 ಬೆಲೆಯ ಹೆರಾಯಿನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಮಾರ್ಕೇಟ್ ಠಾಣಾ ವ್ಯಾಪ್ತಿಯ ಕಾಮತ್ ಗಲ್ಲಿಯಲ್ಲಿ ಹೆರಾಯಿನ್ ಮಾರಾಟದಲ್ಲಿ ತೊಡಗಿದ್ದ ವಕ್ತಾರ ಅಹ್ಮದ್ ನಾಯ್ಕವಾಡಿ, ರೋಷನ್ ಮುಲ್ಲಾ ಎಂಬ ಆರೋಪಿಗಳನ್ನು ಮಾರ್ಕೇಟ್ ಠಾಣೆಯ ಪೊಲೀಸರು ಬಂಧಿಸಿದ್ದು ಬಂಧಿತರಿಂದ 14.39 ಗ್ರಾಂ ತೂಕದ 11,800 ರೂ ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಾರ್ಕೆಟ್ ಹಾಗೂ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಆಕ್ಟ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.



