ಬೆಳಗಾವಿ

ದಾಖಲೆ ಇಲ್ಲದ 5ಕೋಟಿ ರೂ.  ಹಣ ಜಪ್ತಿ

ಬೆಳಗಾವಿ:  ಬೆಳಗಾವಿ ಜಿಲ್ಲಾ ಸಹಕಾರಿ  ಬ್ಯಾಂಕ್ ರವರು ಸಾಗಿಸುತ್ತಿದ್ದ 5 ಕೋಟಿ ರೂ ದಾಖಲೆ ಇಲ್ಲದ ಹಣವನ್ನು ಗೋಕಾಕ್- ವಿಧಾನ ಸಭಾ ಕ್ಷೇತ್ರದ ಅಂಕಲಗಿ ಪೊಲೀಸ್ ಠಾಣಾ ವ್ಯಾಪ್ತಿಯ ಯಾದಲಗುಡ್ಡ ಚೆಕ್ ಪೋಸ್ಟ್ ನಲ್ಲಿ  ಜಪ್ತಿ ಮಾಡಲಾಗಿದೆ.ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲನೆ ಮಾಡದೇ
ಯಾವುದೇ ಸಕ್ಷಮ ಪ್ರಾಧಿಕಾರ ಅನುಮತಿ ಪಡೆಯದೆ  5 ಕೋಟಿ ಹಣವನ್ನು ವರ್ಗಾವಣೆ ‌ಮಾಡುವಾಗ ಪೊಲೀಸರು ಹಾಗೂ ಎಫ್ ಎಸ್ ಟಿ ತಂಡ ವಾಹನ ತಪಾಸಣೆ ನಡೆಸಿ ಹಣವನ್ನು ಜಪ್ತಿ‌ಮಾಡಿದ್ದು ಉಪಖಜಾನೆ ಗೋಕಾಕ್ ಭದ್ರತಾ ಕೋಣೆಯಲ್ಲಿ ಇರಿಸಲಾಗಿದೆ.
TV24 News Desk
the authorTV24 News Desk

Leave a Reply