ಜಿಲ್ಲೆಬೆಳಗಾವಿ

ಶಿವನೇ ಹೀಗೆ ಕಾಲ್ಕಾಲಕ್ಕೆ ಮಳೆ ಬೆಳೆ ಚನ್ನಾಗ್ ಆಗಿ ನಮ್ ಜನ ನೆಮ್ದಿಯಿಂದಿರ್ಲಪ್ಪ

ಬೆಳಗಾವಿ:

ಪಶ್ಚಿಮ ಘಟ್ಟಗಳಲ್ಲಿ ‌ಮುಂದುವರೆದ ಪರಿಣಾಮವಾಗಿ ರಾಜ್ಯಗಳತ್ತ ಹರಿದು‌ಬರುವ ನದಿಗಳು ಹಾಗೂ ಹಳ್ಳ ಕೊಳ್ಳಗಳಿಗೆ ಜೀವ ಕಳೆ ಬಂದಿದೆ. ಆ ಪರಿಣಾಮವಾಗಿ
ಬೆಳಗಾವಿ ಜಿಲ್ಲೆಯ ಜಲಾಶಯಗಳು ‌ಭರ್ತಿ ಹಂತಕ್ಕೆ ಬಂದು ತಲುಪಿವೆ.
ಬೆಳಗಾವಿ ಮಹಾನಗರ ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೋಪ್ಪ ಜಲಾಶಯ ಈಗಾಗಲೇ ಭರ್ತಿಯಾಗಿದೆ.ಸುಮಾರು ಅರ್ಧ ಟಿಎಂಸಿ ಸಾಮರ್ಥ್ಯ ಹೊಂದಿರೋ ರಕ್ಕಸಕೋಪ್ಪ ಜಲಾಶಯವನ್ನು
ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.ಇನ್ನು ಘಟಪ್ರಭಾ ನದಿಗೆ ಅಡ್ಡಲಾಗಿ ಇರೋ ಹಿಡಕಲ್ ಜಲಾಶಯ ‌ಭರ್ತಿ ಹಂತಕ್ಕೆ ಬಂದು ತಲುಪಿದೆ.ಸುಮಾರು 51 ಟಿಎಂಸಿ ಸಾಮರ್ಥ್ಯ ಇರೋ‌ ಹಿಡಕಲ್ ಜಲಾಶಯ ಸದ್ಯ 45 ಟಿಎಂಸಿ ಭರ್ತಿ ಆಗಿದೆ ಇನ್ನೂ ಕೇವಲ 6 ಟಿಎಂಸಿ ನೀರು ಹರಿದು ಬಂದರೆ ಜಲಾಶಯ ಸಂಪೂರ್ಣ ಭರ್ತಿ ಆಗಲಿದೆ ಅತ್ತ ಮಲಪ್ರಭಾ ನದಿಗೆ ಅಡ್ಡಲಾಗಿ ಇರೋ ನವಿಲು ತೀರ್ಥ ಜಲಾಶಯ ಭಾಗಶಃ ಭರ್ತಿಯಾಗಿದೆ ಸುಮಾರು 37 ಟಿಎಂಸಿ ಸಾಮರ್ಥ್ಯ ಹೊಂದಿರೋ ಜಲಾಶಯದಲ್ಲಿ ಸಧ್ಯ 27 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.ಇನ್ನೂ 10 ಟಿಎಂಸಿ ನೀರು ಸಂಗ್ರಹವಾದ್ರೆ ಅದು ಕೂಡಾ ಭರ್ತಿ ಆಗಲಿದೆ
ಬೆಳಗಾವಿ ಮತ್ತು ಮಹಾರಾಷ್ಟ್ರದ ಜಲಾಶಯಗಳು ಭರ್ತಿಯಾಗಿ ನಿರಂತರ ಮಳೆ ಮುಂದುವರೆದರೆ ನದಿಪಾತ್ರದ ಜನರಲ್ಲಿ ಪ್ರವಾಹದ ಆತಂಕ ಹೆಚ್ಚಾಗಲಿದ್ದು ಪ್ರವಾಹ ಪರಿಸ್ಥಿತಿ ತಗ್ಗಿಸಲು ಜಲಾಶಯಗಳಿಂದ ಈಗಾಗಲೇ ಅಲ್ಪಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ.
ನದಿಪಾತ್ರದ ಜನರು ಎಚ್ಚರದಿಂದ ಇರಲು ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ.

TV24 News Desk
the authorTV24 News Desk

Leave a Reply