ಬೆಳಗಾವಿ:
ಮೂರೇ ತಿಂಗಳಲ್ಲಿ ಸವದತ್ತಿಯ ರೇಣುಕಾ ಯಲ್ಲಮ್ಮನ ಹುಂಡಿಗೆ ಭಕ್ತರಿಂದ ಭರಪೂರ ಕಾಣಿಗೆ ಬಂದಿದೆ. ಮೂರು ತಿಂಗಳ ಅವಧಿಯಲ್ಲಿ ರೇಣುಕಾ ಯಲ್ಲಮ್ಮನ ಸನ್ನಿಧಾನದ ಹುಂಡಿಗೆ ಬರೊಬ್ಬರಿ 3.81 ಕೋಟಿ ರೂ ಸಂಗ್ರಹವಾಗಿದೆ. 2025 ರ ಏಪ್ರೀಲ್ 1 ರಿಂದ ಜೂನ್ 30 ರ ಅವಧಿಯವರೆಗೆ ಭಕ್ತರು ಹುಂಡಿಗೆ ಹಾಕಿದ್ದ ನಗನಾಣ್ಯ ಚಿನ್ನಾಭರಣಗಳ ಎಣಿಕೆ ಕಾರ್ಯ ನಡೆಯಿತು. 2023 ರ ಅವಧಿಯಲ್ಲಿ 1.65 ಕೋಟಿ ಹಾಗೂ 2024 ರ ಅವಧಿಯಲ್ಲಿ 1.96 ಕೋಟಿ ರೂ ಕಾಣಿಗೆ ಸಂಗ್ರಹವಾಗಿತ್ತು.ಈ ಬಾರಿ ಅಮ್ಮನ ಹುಂಡಿಗೆ ಭಕ್ತರು ಹಾಕಿದ ಕಾಣಿಗೆ ದುಪ್ಪಟ್ಟಾಗಿರುವುದು ವಿಶೇಷ ಸಂಗತಿ.3.81 ಕೋಟಿಯಲ್ಲಿ 3.39 ಕೋಟಿ ರೂ ನಗದು 32.94 ಲಕ್ಷ ಮೌಲ್ಯದ 340 ಗ್ರಾಂ ಚಿನ್ನಾಭರಣ,9.79 ಲಕ್ಷ ಮೌಲ್ಯದ 8.7 ಕೆಜಿ ಬೆಳ್ಳಿ ಆಭರಣ ಸೇರಿದೆ. ವಿವಿಧ ಸುಧಾರಣಾ ಕ್ರಮಗಳನ್ನು ಅನುಸರಿಸಿದ್ದರಿಂದ ದೇವಸ್ಥಾನದ ಆದಾಯ ಹೆಚ್ಚಾಗಿದೆ. ಈ ಹಣವನ್ನು ಅಭಿವೃದ್ಧಿ ಕೆಲಸಕ್ಕೆ ಬಳಸಲಾಗುವುದು ಎಂದು ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ್ ದುಡಗುಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



