ಬೆಳಗಾವಿ:
ಶ್ರೀರಾಮಸೇನೆ ಕಾರ್ಯಕರ್ತರನ್ನು ಗಿಡಕ್ಕೆ ಕಟ್ಟಿ ಹಾಕಿ ಹೊಡೆದ ವಿಚಾರಕ್ಕೆ ಸಂಬಂಧಪಟ್ಟಂತೆ
ಬೆಳಗಾವಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು.
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು ಇನ್ನು ಪ್ರತಿಭಟನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್ ಇದು ಸಂವಿಧಾನ ಬಾಹಿರ ಘಟನೆ, ಇಂಗಳಿ ಎಂಬ ಗ್ರಾಮದಲ್ಲಿ ಸೊಕ್ಕಿನಿಂದ ಮರಕ್ಕೆ ಕಟ್ಟಿ ಹೊಡೆದಿದ್ದಾರೆ ಹೊಡೆಯಲು ಇದು ಪಾಕಿಸ್ಥಾನವೋ ಅಪಘಾನಿಸ್ಥಾನವೋ.? ಎಂದು ಪ್ರಶ್ನೆ ಮಾಡಿದರು ಅಲ್ಲದೆ
ತಾಲಿಬಾನ್ ಮಾದರಿಯಲ್ಲಿ ಆಗ್ತಿರೋ ಈ ಘಟನೆ ನಾವು ಖಂಡಿಸಬಾರದಾ ಎಂದು ಪ್ರಶ್ನೆ ಮಾಡಿದರು.ನಡೆದ ಘಟನೆಯನ್ನು ಡೈವರ್ಟ್ ಮಾಡುವ ಕೆಲಸವನ್ನು ಕಾಂಗ್ರೇಸ್ ಸರ್ಕಾರ ಮಾಡ್ತಿದೆ.
ನಮ್ಮ ಹುಡುಗರ ಮೇಲೆ ಬೇರೆ ಬೇರೆ ಆರೋಪಗಳನ್ನು ಮಾಡಲಾಗ್ತಿದೆ ಒಂದು ಕಂಬಕ್ಕೆ ಕಟ್ಟಿ ಹೊಡೆಯುತ್ತಾರೆ ಅಂದರೆ ಅದು ಗಂಭೀರ ವಿಚಾರ ಇದನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು.
ಸಾರ್ವಜನಿಕರಿಗೆ ರಕ್ಷಣೆ ಕೊಡಬೇಕಾದದ್ದು ನಿಮ್ಮ ಕರ್ತವ್ಯ
ಅದನ್ನು ಬಿಟ್ಟು ನೀವು ಹೊಡೆದವರಿಗೆ ಪ್ರೋತ್ಸಾಹ ಮಾಡ್ತಿದ್ದರಿ ಕಾಂಗ್ರೇಸ್ ಸರ್ಕಾರದ ಮಾತು ಕೇಳಿ ಬಚಾವ್ ಮಾಡೋದು ಪ್ರೋತ್ಸಾಹ ಮಾಡುವ ಕೆಲಸ ಮಾಡಿದರೆ ನಿಮ್ಮನ್ನು ಕಂಬಕ್ಕೆ ಕಟ್ಟಿ ಹೊಡೆಯುವ ಪರಿಸ್ಥಿತಿ ಬರುತ್ತೆ
ಡಿಜೆ ಹಳ್ಳಿ ಕೆಜೆ ಹಳ್ಳಿ ಹುಬ್ಬಳ್ಳಿ ಘಟನೆಗಳನ್ನು ನೆನಪಿಸಿಕೊಳ್ಳಿ
ಇವರಿಗೆ ಎಲ್ಲಿಂದ ಬಂತು ಧೈರ್ಯ ಎಂದು ಪ್ರಶ್ನೆ ಮಾಡಿದ್ದಲ್ಲದೆ ಕಾಂಗ್ರೇಸ್ ಸರ್ಕಾರ ಅವರನ್ನು ಬಚಾವ್ ಮಾಡುವ ಪ್ರಕ್ರಿಯೇ ಮಾಡ್ತಿರೋದೆ ಈ ಜಿಹಾದಿ ಮನಸ್ಥಿತಿಗೆ ಕಾರಣ ಎಂದರು
ಗೋ ರಕ್ಷಕರು ಹಿಂದೂಗಳು ಎಂದೂ ಯಾವತ್ತೂ ಕುಕೃತ್ಯ ಮಾಡುವವರಲ್ಲ,ಗೋ ರಕ್ಷಣೆ ಮಾಡುವವರನ್ನು ಮರಕ್ಕೆ ಕಟ್ಟಿ ಹೊಡೆಯುವ ಧೈರ್ಯ ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದರು.ಒಂದು ಎಚ್ಚರಿಕೆ ಕೊಡ್ತಿದ್ದೆನೆ ಇನ್ನು ಮುಂದೆ ಈ ರೀತಿ ಮಾಡಿದರೆ ಇನ್ನು ಹಿಂದೂ ಸಮಾಜ ಅದಕ್ಕೆ ಉತ್ತರ ಕೊಡಬೇಕಾಗುತ್ತೆ.
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ ಆದರೂ ಲಾರಿಯಲ್ಲಿ ಗಾಡಿಗಳಲ್ಲಿ ರಾಜಾರೋಷವಾಗಿ ಗೋವುಗಳನ್ನು ತೆಗೆದುಕೊಂಡು ಹೋಗಲಾಗ್ತಿದೆ. ಪೊಲೀಸರು ಒಂದು ಆಕಳನ್ನಾದರೂ ಹಿಡಿದಿದ್ದಾರಾ ಎಂದು ಪ್ರಶ್ನೆ ಮಾಡಿದರು
ಕಾಂಗ್ರೇಸ್ ಹೇಳುವ ಮಾತು ಕೇಳಬೇಡಿ ಕಾನೂನಿನ ಮಾತು ಕೇಳಿ
ನಮ್ಮ ಕಾರ್ಯಕರ್ತರು ರೌಡಿ ಶೀಟರ್ ಇರಬಹುರು ಎಂಥೆವರನ್ನು ಈಗ ರೌಡಿ ಶೀಟರ್ ಮಾಡಲಾಗುತ್ತಿದೆ ಎಂದರೆ ಅದಕ್ಕೆ ಬೆಲೆಯೇ ಇಲ್ಲದಂತಾಗಿದೆ.
ಕಲ್ಲಡಕ ಪ್ರಭಾಕರ್ ಭಟ್, ಪುತೀಲ್ ಚಕ್ರವರ್ತಿ ಸೂಲಿಬೆಲೆ
ಇಂತಹ ಹಿಂದೂ ಕಾರ್ಯಕರ್ತರನ್ನು ರೌಡಿ ಶೀಟರ್ ಮಾಡಲಾಗುತ್ತಿದೆ.
ಗಿಡಕ್ಕೆ ಕಟ್ಟಿ ಹೊಡೆದಿದ್ದನ್ನು ಬಿಟ್ಟು ಉಳಿದಿದ್ದನ್ನೆಲ್ಲ ಹೇಳ್ತಿದ್ದಿರಿ.
ಹಿಂದೂ ಮುಸ್ಲಿಂ ಎಲ್ಲರೂ ಹೊಡೆದಿದ್ದಾರೆ ಅಂತ ಹೇಳ್ತಿರಿ.
ಇದು ನಿಮ್ಮ ಘನತೆ ಉಳಿಸುವಂತದ್ದಲ್ಲ
ಈ ಘಟನೆ ಇಡೀ ದೇಶಾದ್ಯಂತ ಚರ್ಚೆ ಆಗ್ತಿದೆ.ಅದನ್ನ ವಿಚಾರ ಮಾಡಿದನ್ನು ಬಿಟ್ಟು ಉಳಿದ್ದನ್ನೆಲ್ಲ ಡೈವರ್ಟ್ ಮಾಡ್ತಿದ್ದಾರೆ.
ಗೋವಿಗಾಗಿ ನಾವು ಸಾಯೋಕು ಸಿದ್ಧ ಗೋವಿನ ಸಲುವಾಗಿ ಸಾಯಿಸಲು ಸಿದ್ಧವಾಗಿದ್ದೆವೆ.
ಸಾವಿರಾರೂ ವರ್ಷಗಳಿಂದ ಈ ನೆಲದಲ್ಲಿ ನಮಗೆ ಅನ್ಯಾಯ ಆಗ್ತಿದೆ.
ನಡೆದಾಡುವ ದೇವರು ಅಂತ ಗೋವನ್ನ ನಾವು ಕರೀತಿವಿ.
ಕಾಂಗ್ರೇಸ್ ಸರ್ಕಾರ ಸುಧಾರಿಸಿಕೊಳ್ಳದಿದ್ದರೆ ಹಿಂದೂ ಸಮಾಜ ಸಿಡಿದೇಳುತ್ತೆ ಎಂದು ಮುತಾಲಿಕ್ ಎಚ್ಚರಿಸಿದರು.

