ಕ್ರೀಡೆ

ಕಿವೀಸ್ ತಂಡವನ್ನುಸೋಲಿಸಿ ವಿಶ್ವಕಪ್​ ಫೈನಲ್​ಗೆ ಎಂಟ್ರಿಕೊಟ್ಟ ಪಾಕಿಸ್ತಾನ

2007ರಲ್ಲಿ ಆಡಿದ ಮೊದಲ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಫೈನಲ್ ತಲುಪಿದ್ದರೂ ಪ್ರಶಸ್ತಿ ಗೆಲ್ಲಲಾಗಲಿಲ್ಲ. ಆದರೆ 2009ರಲ್ಲಿ ಆಡಿದ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದ್ದ ಪಾಕಿಸ್ತಾನ ಪ್ರಶಸ್ತಿಯನ್ನೂ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
 ಟಿ20 ವಿಶ್ವಕಪ್‌ನ ಮೊದಲೆರಡು ಪಂದ್ಯಗಳಲ್ಲಿ ಭಾರತ ಮತ್ತು ಜಿಂಬಾಬ್ವೆ ವಿರುದ್ಧ ಸೋಲು ಕಂಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ  ಪುನರಾಗಮನ ಮಾಡಿದ ರೀತಿಯನ್ನು ಯಾರೂ ಕೂಡ ಊಹಿಸಿರಲಿಲ್ಲ. ವಾರದ ಹಿಂದೆ ವಿಶ್ವಕಪ್‌ನಿಂದ ಹೊರಗುಳಿಯಲಿದೆ ಎಂದು ಅನಿಸಿಕೊಂಡಿದ್ದ ತಂಡವು ಇದೀಗ ವಿಶ್ವಕಪ್‌ನ ಫೈನಲ್‌ಗೆ ತಲುಪಿ, ಎಲ್ಲರನ್ನೂ ಅಚ್ಚರಿಗೊಳಿಸಿದೆ. ಸಿಡ್ನಿ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ ಮತ್ತೊಮ್ಮೆ ಏಕಪಕ್ಷೀಯ ಶೈಲಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಮೂರನೇ ಬಾರಿಗೆ ಫೈನಲ್‌ಗೆ ತಲುಪಿದೆ. 
ನ್ಯೂಜಿಲೆಂಡ್ ಪಡೆಯನ್ನು ಕಡಿಮೆ ರನ್​ಗಳಿಗೆ ಕಟ್ಟಿಹಾಕಿದ ಬಳಿಕ ರನ್ ಬೆನ್ನಟ್ಟಿದ ಪಾಕಿಸ್ತಾನಕ್ಕೆ ತಂಡದ ಆರಂಭಿಕರು ಉತ್ತಮ ಆರಂಭ ನೀಡಿದರು. ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅತ್ಯಂತ ಮಹತ್ವದ ಪಂದ್ಯದಲ್ಲಿ ತಮ್ಮ ಹಳೆಯ ಫಾರ್ಮ್​ಗೆ ಮರಳುವ ಮೂಲಕ ಅಮೋಘ ಶತಕದ ಜೊತೆಯಾಟ ನಡೆಸಿದರು. ಅಲ್ಲದೆ ಬಾಬರ್-ರಿಜ್ವಾನ್ ಈ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ 50 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಬಾಬರ್ ಅಜಮ್ 42 ಎಸೆತಗಳಲ್ಲಿ 53 ರನ್ ಗಳಿಸಿ ಔಟಾದರು. ಅಲ್ಲದೆ ರಿಜ್ವಾನ್ ಅವರೊಂದಿಗೆ ಆರಂಭಿಕ ವಿಕೆಟ್‌ಗೆ 105 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಬಳಿಕ ರಿಜ್ವಾನ್ ಕೂಡ 57 ರನ್ ಗಳಿಸಿ ಪೆವಿಲಿಯನ್ ಸೇರಿದರು. ಕೊನೆಯ ಓವರ್‌ನಲ್ಲಿ ಒಟ್ಟು 3 ವಿಕೆಟ್ ಕಳೆದುಕೊಂಡು ಪಾಕಿಸ್ತಾನ ಗುರಿ ತಲುಪಿತು.
TV24 News Desk
the authorTV24 News Desk

Leave a Reply