ಕ್ರೈಂಬೆಳಗಾವಿ

ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಅಪಘಾತ ಒಂದೇ ದಿನ ಒಟ್ಟು ಐವರ ಸಾವು!

ಬೆಳಗಾವಿ:

ಜಿಲ್ಲೆಯಲ್ಲಿಂದು ಜವರಾಯ ತನ್ನ ಅಟ್ಟಹಾಸವನ್ನು‌ ಮರೆದಿದ್ದಾನೆ. ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ಐವರು ದುರ್ಮರಣಕ್ಕೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರುಗುಂಡಿ ಗ್ರಾಮದ ಬಳಿ ಬಸ್ ಹಾಗೂ ಕಾರು ಮಧ್ಯೆ ನಡೆದ ಅಪಘಾತದಲ್ಲಿ ಅಪ್ಜಲಪುರ ಮೂಲದ ರಾಹುಲ್‌,ಗಿರೀಶ್,ಹಾಗೂ ಸಂಗಮೇಶ್ ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಎರಡು ಲಾರಿ ಕಾರು ಹಾಗೂ ಬೈಕ್ಗಳ ಮಧ್ಯೆ ಅಪಘಾತ ಸಂಭವಿಸಿ ಹುಬ್ಬಳ್ಳಿಯ ನಿವಾಸಿ ಶಿವಪ್ಪ ಶಹಾಪೂರ,ಹಾಗೂ ನಂದಗಡ ನಿವಾಸಿ ರಫೀಕ್ ಜಾಂಬೋಟಿ ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಅಥಣಿ ಮತ್ತು ಹಿರೇಬಾಗೇವಾಡಿ ಠಾಣೆಗಳಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.

TV24 News Desk
the authorTV24 News Desk

Leave a Reply