ಜಿಲ್ಲೆಬೆಳಗಾವಿ

ನಮ್ ಸಾಹೇಬ್ರ ಎಂಥಾವ್ರ ಗೊತೈತೇನ್ರಿ ಪಟ್ಟಣ್ ಸರ್!

ಬೆಳಗಾವಿ:
ಧಾರವಾಡದ‌ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ವಿರುದ್ಧ ಅಪಮಾನಕರ ಹೇಳಿಕೆ ನೀಡಿರುವ ಶಾಸಕ ಅಶೋಕ ಪಟ್ಟಣ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಬಸವರಾಜ ಬಾವಲತ್ತಿ ಹೇಳಿದರು.
ಭಾನುವಾರ ಬೆಳಗಾವಿ ರೆಡ್ಡಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಏ.28 ರಂದು ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರಿಗೆ ಆದ ಅಪಮಾನ ಇಡೀ ರಾಜ್ಯಕ್ಕೆ ಗೊತ್ತಿದೆ.
ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರು ಭರಮನಿ ಅವರು ರಾಜಕೀಯ ಪ್ರೇರೇಪಿತವಾಗಿ ರಾಜೀನಾಮೆ ಪತ್ರ ಬರೆದಿದ್ದಾರೆ. ಬಿಜೆಪಿ ಒತ್ತಡಕ್ಕೆ ಮಣಿದಿದ್ದಾರೆ. ರಾಜೀನಾಮೆ ‌ಕೊಡುವುದಿದ್ದರೇ ಅಂದೇ ಕೊಡಬೇಕಿತ್ತು ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರು ಕಳೆದ 31 ವರ್ಷಗಳಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ದಕ್ಷವಾಗಿ ಕೆಲಸ ಮಾಡಿದ್ದಾರೆ. ಆದರೆ ಅಶೋಕ ಪಟ್ಟಣ ಅವರು ಭರಮನಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು ದೊಡ್ಡ ದುರಂತ ಎಂದರು.
ನಾರಾಯಣ ಭರಮನಿ ಅವರು ಎಲ್ಲ ಸಮುದಾಯದವರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಭರಮನಿ ಅವರ ಪಾತ್ರ ಹಿರಿಮೆಯದ್ದಾಗಿದೆ. ಇಡೀ ಪೊಲೀಸ್ ಇಲಾಖೆಗೆ ಅವರು ಏನು ಎನ್ನುವುದು ಎಲ್ಲರಿಗೂ ಗೊತ್ತು ಎಂದರು.
ಉತ್ತರ ಕರ್ನಾಟಕದ ಜನರಿಗೆ ನಾರಾಯಣ ಭರಮನಿ ಏನು ಎನ್ನುವುದು ಸರಕಾರ ಮಟ್ಟದಲ್ಲಿ ತಿಳಿದಿದೆ. ಶಾಸಕ ಅಶೋಕ ಪಟ್ಟಣ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿ ರೆಡ್ಡಿ ಸಮಾಜದ ಶಾಸಕ ಅಶೋಕ ಪಟ್ಟಣ ಅವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ಬಸನಗೌಡ ಕಾಮನಗೌಡರ, ರಾಜೇಂದ್ರ ಪಾಟೀಲ್, ಬಿ.ಎನ್.ನಾಡಗೌಡ, ರಾಮಣ್ಣ ಅರಕೇರಿ, ಎಸ್.ಎ.ಅರಕೇರಿ, ಪರಮೇಶ್ವರ ಮಳ್ಳೂರು, ನಾರಾಯಣ ಕೆಂಚರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

TV24 News Desk
the authorTV24 News Desk

Leave a Reply