ಬೆಳಗಾವಿಬೆಳಗಾವಿ ನಗರ

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ

ಬೆಳಗಾವಿ : ನಾಡಿನೆಲ್ಲೆಡೆ 67 ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ನಡೆಯುತ್ತಿದ್ದು, ಬೆಳಗಾವಿ  ನಗರದಲ್ಲೂ ರಾಜ್ಯೋತ್ಸವ ಸಂಭ್ರಮ‌ ಮನೆ ಮಾಡಿದೆ. ಬೆಳಗಾವಿ ಜಿಲ್ಲಾಕ್ರೀಡಾಂಗಣದಲ್ಲಿ  ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ಧ್ವಜಾರೋಹಣದಲ್ಲಿ ಭಾಗಿಯಾದ ಜಿಲ್ಲಾ ‌ಉಸ್ತುವಾರಿ ಸಚಿವ ಗೋವಿಂದ ಕಾರಜೋಳ  ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಂತರ ಬಲೂನ ಹಾರಿಸುವ ಮುಕಾಂತರ 67ನೇ ಕನ್ನಡ ರಾಜ್ಯೋತ್ಸವಕ್ಕೆ  ಚಾಲನೆ ನೀಡಿದರು ಬಳಿಕ ತೆರೆದ ವಾಹನದಲ್ಲಿ ತೆರಳಿ ಗೌರವ ವಂದನೆ ಸ್ವೀಕಾರ ಮಾಡಿದರು. ಇದೇ ವೇಳೆ ಪೊಲೀಸ್ ಎನ್​ಸಿಸಿ ಮತ್ತು ಶಾಲಾ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಸ್ಥಳಿಯ ಶಾಸಕ, ಅನಿಲ ಬೆನಕೆ  ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ಭಾಗಿಯಾದರು.
TV24 News Desk
the authorTV24 News Desk

Leave a Reply