ಬೆಳಗಾವಿ:ಮನೆಯಲ್ಲಿದ್ದ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಮುತಗಾ ಗೋಕುಲ ನಗರದಲ್ಲಿ ನೆಡೆದಿದೆ.
ಗೋಕುಲ ನಗರದಲ್ಲಿರುವ ಮನೆಯೊಂದಕ್ಕೆ ತಡರಾತ್ರಿ ಕಣ್ಣ ಹಾಕಿದ ಕಳ್ಳರು 40 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆಂದು ಮನೆಯವರು ಹೇಳಿದ್ದಾರೆ. ಪೋಲೀಸರ ಮಾಹಿತಿ ಪ್ರಕಾರ 20 ಗ್ರಾಂ ಚಿನ್ನ ಕಳವು ಆಗಿದೆ ಎಂದು ದೂರು ದಾಖಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.