Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಜೈಲ ಅಧಿಕಾರಿಗಳಿಂದಲೇ ನನ್ನ ಮಗನ ಕೊಲೆಗೆ ಯತ್ನ  

ಬೆಳಗಾವಿ:ಹಿಂಡಲಗಾ ಕೇಂದ್ರ ಕಾರಗೃಹದಲ್ಲಿ ಜುಲೈ 29ರಂದು ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಸ್ಕ್ರೂಡ್ರೈವರನಿಂದ ಚುಚ್ಚಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಮಂಡ್ಯ ಮೂಲದ ಸಾಯಿಕುಮಾರ  ತೀವ್ರ ಗಾಯಗೊಂಡಿದ್ದನು,   ಇದೀಗ ಜೈಲಿನ ಅವ್ಯವಹಾರಗಳು ಗೊತ್ತಾಗಿದ್ದಕ್ಕೆ ಅಧಿಕಾರಿಗಳಿಂದಲೇ ನನ್ನ ಮಗನನ್ನು ಕೊಲ್ಲಿಸಲು ಯತ್ನಿಸಿದ್ದಾರೆಂದು ಸಾಯಿಕುಮಾರ ತಾಯಿ ಪುಟ್ಟತಾಯಮ್ಮ ಆರೋಪಿಸಿದ್ದಾರೆ.
 ಹಿಂಡಲಗಾಕೇಂದ್ರ ಕಾರಾಗೃಹದಲ್ಲಿ ಜುಲೈ 29ರಂದು ಕೈದಿಗಳ ನಡುವೆ ಮಾರಾಮಾರಿ ನಡೆದಿತ್ತು. ಈ ವೇಳೆ ಶಂಕರ್ ಭಜಂತ್ರಿಯಿಂದ ಮತ್ತೊಬ್ಬ ಕೈದಿ ಸಾಯಿಕುಮಾರ್ ಮೇಲೆ ಸ್ಕ್ರೂಡ್ರೈವರ್​ನಿಂದ ಐದು ಬಾರಿ ಚುಚ್ಚಿ ಕೊಲೆಗೆ ಯತ್ನಿಸಿದ್ದ. ಈ ಹಿನ್ನಲೆ ಗಾಯಗೊಂಡಿದ್ದ ಕೈದಿ ಸಾಯಿಕುಮಾರ್​ನನ್ನು ಕೂಡಲೇ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಬಳಿಕ ಆಸ್ಪತ್ರೆ ಸುತ್ತ ಬೀಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿತ್ತು. ಇದೀಗ ಆತನ ಸ್ಥಿತಿ ಗಂಭೀರವಾಗಿದ್ದು, ಮಗನ ಭೇಟಿಗೆ ತಾಯಿ ಸೇರಿದಂತೆ ಆತನ ಕುಟುಂಬಸ್ಥರು ಮಂಡ್ಯದಿಂದ ಬೆಳಗಾವಿ ಆಗಮಿಸಿದ್ದಾರೆ.
ಮಗನ ಸ್ಥಿತಿ ಗಂಭೀರವಾಗಿದ್ದು, ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂದು ಕೈದಿಯ ತಾಯಿ ಪುಟ್ಟತಾಯಮ್ಮ ಆಸ್ಪತ್ರೆ ಮುಂದೆ ಕಣ್ಣೀರು ಹಾಕುತ್ತಾ ಪೊಲೀಸರ ವಿರುದ್ದ ಆರೋಪಿಸಿದ್ದಾರೆ. ಇಂದು ಬೆಳಗ್ಗೆಯಿಂದ ಉಸಿರಾಟದ ಸಮಸ್ಯೆಯಿಂದ ಸಾಯಿಕುಮಾರ್ ಬಳಲುತ್ತಿದ್ದಾನೆ. ಆದರೂ ಐಸಿಯುವಿಗೆ ಶಿಪ್ಟ್ ಮಾಡಿ ಚಿಕಿತ್ಸೆ ಕೊಡಿಸುತ್ತಿಲ್ಲ, ಜೊತೆಗೆ ಭೇಟಿಗೂ ಬಿಡುತ್ತಿಲ್ಲ. ಮಗನ ಸ್ಥಿತಿ ಗಂಭೀರ ಇದ್ದರೂ ಜೈಲು ಅಧಿಕಾರಿಗಳು ನಮಗೆ ಎನೂ ಹೇಳಿಲ್ಲ.ಮಾಧ್ಯಮಗಳಲ್ಲಿ ಸುದ್ದಿ ನೋಡಿ, ಇಂದು ಮಗನ ಭೇಟಿಗೆ ಬಂದಿದ್ದೇವೆ ಎಂದು ಕಣ್ಣೀರು ಹಾಕುತ್ತ ಹೇಳಿದರು.
ಇನ್ನು ಹಿಂಡಲಗಾ ಜೈಲಿನ ಅವ್ಯವಹಾರಗಳು ಗೊತ್ತಾಗಿದ್ದಕ್ಕೆ ನನ್ನ ಮಗನನ್ನು ಅಧಿಕಾರಿಗಳೇ ಸೇರಿ ಕೊಲ್ಲಿಸಲು ಯತ್ನಿಸಿದ್ದಾರೆಂದು ಹಿಂಡಲಗಾ ಜೈಲು ಅಧಿಕಾರಿಗಳ ವಿರುದ್ಧ ಸಾಯಿಕುಮಾರ್​ನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಜೈಲಿನಲ್ಲಿ ಸ್ಕ್ರೂಡ್ರವರ್ ಹೇಗೆ ಬಂತೂ, ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಲು ಏಕೆ ಯತ್ನಿಸಿದ್ದಾರೆ. ಇದೀಗ ಕೊಲೆ ಮಾಡಲು ಯತ್ನಿಸಿದ ಕೈದಿ ಹುಚ್ಚನೆಂದು ಹೇಳುತ್ತಿದ್ದಾರೆ. ಹುಚ್ಚ ಆಗಿದ್ದರೇ ಯಾಕೆ ಸೆಲ್​ನಲ್ಲಿ ಬಿಟ್ಟರು ಎಂದು ಜೈಲರ್ ವಿರುದ್ಧ ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.
TV24 News Desk
the authorTV24 News Desk

Leave a Reply

error: Content is protected !!