ಅಥಣಿ: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಮುಂದಾಗಿರುವ ಮಾಜಿ ಉಪಮುಖ್ಯಮಂತ್ರಿ ಹಾಗೂ ಬೆಳಗಾವಿ ಜಿಲ್ಲೆಯ ಪ್ರಭಾವಿ ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಲಕ್ಷ್ಮಣ್ ಸವದಿಗೆ ಕಾಂಗ್ರೆಸ್ ನಾಯಕರಲ್ಲಿ ಚರ್ಚೆ ನಡೆಸಿ ಇಂದು ಸಂಜೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಂದು ಸುದ್ದಿ ಬರುತ್ತಿದ್ದಂತೆಯೇ ಅಥಣಿಗೆ ದಿಢೀರನೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಅಥಣಿ ಹೊರವಲಯದಲ್ಲಿ ಮಹೇಶ್ ಕುಮಠಳ್ಳಿ
ಅವರೊಂದಿಗೆ ಗುಪ್ ಚುಪ್ ಮೀಟಿಂಗ ಗೋಕಾಕ ಸಾವಕಾರ ನಡೆಸಿದ್ದಾರೆ. ಅಕ್ಸ್ಮಾತ ಕಾಂಗ್ರೆಸ್ ಲಕ್ಷ್ಮಣ ಸವದಿ ಅವರಿಗೆ ಅಥಣಿ ಟಿಕೆಟ್ ನೀಡಿದರೆ ಮುಂದಿನ ಚುನಾವಣಾ ರಣತಂತ್ರ ಹೇಗಿರಬೇಕು ಎಂದು ಗುಪ್ತ ಸಭೆ ನಡೆಸಿದ್ದಾರೆ. ಇವರಿಗೆ ಶ್ರೀಮಂತ ಪಾಟೀಲ್ ಪುತ್ರ ಸಾಥ್ ನೀಡಿದ್ದಾರೆಂದು ತಿಳಿದು ಬಂದಿದೆ.









