Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಗೋಕಾಕ ಮರ್ಡರ್ ಕೆಸ್ ಗೆ  ಬಿಗ್ ಟ್ವಿಸ್ಟ್ ಮೂರನೇ ಆರೋಪಿ ಅರೆಸ್ಟ್  

ಗೋಕಾಕ: ಫೆಬ್ರವರಿ 10ರ ರಾತ್ರಿ 8 ಗಂಟೆ ಸುಮಾರಿಗೆ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದ ಉದ್ಯಮಿ ರಾಜು ಝಂವರ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಮರುದಿನ ಗೋಕಾಕ್ ಶಹರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದು, ಈ ವೇಳೆ ಉದ್ಯಮಿ ತಮ್ಮ ಮೊಬೈಲ್​​ನಿಂದ ಕೊನೆಯದಾಗಿ ಗೋಕಾಕ್‌ ಸಿಟಿ ಆಸ್ಪತ್ರೆ ವೈದ್ಯ ಡಾ.ಸಚಿನ್ ಶಿರಗಾವಿ ಅವರೊಂದಿಗೆ ಮಾತನಾಡಿರುವುದು ತಿಳಿದಿತ್ತು.ಅನುಮಾನದ ಮೇರೆಗೆ ಪೊಲೀಸರು ವೈದ್ಯರನ್ನು ಕರೆಯಿಸಿ ವಿಚಾರಣೆ ನಡೆಸಿದ ವೇಳೆ ಅವರು ಕೊಟ್ಟ ಉತ್ತರಗಳು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಪರಿಣಾಮ ವೈದ್ಯ ಡಾ.ಸಚಿನ್ ಶಿರಗಾವಿ ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆ ವೇಳೆ ತಾನು ಹಾಗೂ ಇನ್ನು ಇನ್ನಿಬ್ಬರು  ಸೇರಿ ಉದ್ಯಮಿಯನ್ನು ಕೊಲೆ ಮಾಡಿದ್ದಾಗಿ ವೈದ್ಯ ಒಪ್ಪಿಕೊಂಡಿದ್ದನಂತೆ.

ಕೊಲೆ ಪ್ರಕರಣದ ಮುಖ್ಯ ಆರೋಪಿ ಡಾ. ಸಚಿನ ಶಿರಗಾವಿ, ಡಾ. ಶಿವಾನಂದ ಪಾಟೀಲ ಈ ಇಬ್ಬರು ಆರೋಪಿಗಳನ್ನು ಈಗಾಗಲೇ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
 ಮೂರನೇ ಆರೋಪಿಯಾದ ಇರ್ಷಾದ ಅಹಮದ ತ್ರಾಸಗರ   ಎಂಬುವವನನ್ನು ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.  ಪೊಲೀಸರು ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ತನಿಖೆಯ ನಂತರ ಎಲ್ಲ ವಿಷಯಗಳು ಹೊರ ಬಿಳಲಿವೆ.
TV24 News Desk
the authorTV24 News Desk

Leave a Reply

error: Content is protected !!