ರಾಮದುರ್ಗ:- ಪಟ್ಟಣದ ಎಲ್ಲಾ ಕಿರಿಯ ಹಾಗೂ ಪ್ರೌಢಶಾಲೆ ವತಿಯಿಂದ ಕಲಿಕಾ ಹಬ್ಬದ ಕಾರ್ಯಕ್ರಮ 2023 ನಡೆಸಲಾಯಿತು, ಇದರಲ್ಲಿ ವಿಶೇಷವಾಗಿ ಕಂಡುಬಂದದ್ದು ವಿವಿಧ ರೀತಿಯ ಚಟುವಟಿಕೆಯ ಕಾರ್ಯಕ್ರಮದ ಸಮವಸ್ತ್ರಗಳು ಹಾಗೂ ಧಾರ್ಮಿಕ ಹಾಗೂ ಸಂಸ್ಕೃತಿಕ ಸಂಬಂಧ ಪಟ್ಟ ಉಡುಪುಗಳ ಜೊತೆಗೆ ಎಲ್ಲ ವಿದ್ಯಾರ್ಥಿಗಳು ಕಂಡುಬಂದದ್ದು ತುಂಬಾ ವಿಶೇಷವಾಗಿತ್ತು. ಇದರಂತೆ ನೇತಾಜಿ ಪ್ರೌಢಶಾಲೆ ವತಿಯಿಂದ ಬಂಜಾರ ಡ್ಯಾನ್ಸ್ , ನಂತರ ಮೌಲಾನಾ ಹಜ್ರತ್ ಸರ್ಕಾರಿ ಪ್ರೌಢಶಾಲೆ ವತಿಯಿಂದ ದೇಶಭಕ್ತಿ ಗೀತೆ, ಮತ್ತು ಶಾಸಕರ ಮಾದರಿ ಶಾಲೆ ನಂಬರ -4 ಶಾಲೆ ವತಿಯಿಂದ ಡೊಳ್ಳು ಕುಣಿತ ಏರ್ಪಟ್ಟಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದವರು ಎನ ವೈ ಕುಂದರಗಿ ಶಿಕ್ಷಣ ಕ್ಷೇತ್ರ ಅಧಿಕಾರಿ ಹಾಗೂ ಶಾಸಕರಾದ ಮಹಾದೇವಪ್ಪ ಯಾದವಾಡ, ಹಾಗೂ ರಾಮದುರ್ಗ ನಗರದ ಶಾಲೆಯ ಮುಖ್ಯೋಪಾಧ್ಯರು ಹಾಗೂ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದರು.
tv24plus.in > Blog > ಜಿಲ್ಲೆ > ಬೆಳಗಾವಿ > ರಾಮದುರ್ಗದಲ್ಲಿ ಕಲಿಕಾ ಹಬ್ಬದ ಕಾರ್ಯಕ್ರಮ






