ಬೆಳಗಾವಿಬೆಳಗಾವಿ ನಗರ

ಅಂತರಾಷ್ಟ್ರೀಯ ಗಾಳಿಪಟ ಉತ್ಸವ: ಶಾಸಕ ಅಭಯ ಪಾಟೀಲ

ಬೆಳಗಾವಿ: ಕಳೆದ 11 ವರ್ಷಗಳಿಂದ ನಡೆಯುತ್ತಿರುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವವು ಬೆಳಗಾವಿ ನಗರಕ್ಕೆ ಜಾಗತಿಕ ಮನ್ನಣೆಯನ್ನು ತಂದಿದ್ದು, ನಗರದ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತಿದೆ. ಈ ಬಾರಿಯ ಉತ್ಸವವು ಜ.21 ರಿಂದ 24 ರವರೆಗೆ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ  ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ ಎಂದು ಶಾಸಕ ಅಭಯ ಪಾಟೀಲ ಅವರು ತಿಳಿಸಿದರು. ‌
ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಮಾದ್ಯಮಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಯುಕೆ, ಸ್ವಿಜರ್ಲ್ಯಾಂಡ್ ಸೇರಿದಂತೆ ಎಂಟು ದೇಶದವರು ಬೆಳಗಾವಿಯಲ್ಲಿ ನಡೆಯುವ ಗಾಳಿ ಪಟ ಉತ್ಸವಕ್ಕೆ ಬರುತ್ತಿದ್ದಾರೆ. ‌
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರನ್ನು ಪಟ್ಟಣಕ್ಕೆ ಆಕರ್ಷಿಸುತ್ತದೆ ಮತ್ತು ಪಟ್ಟಣದ ಜನರಿಗೆ ವ್ಯಾಪಾರದ ಅವಕಾಶಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಯುವಕರು ತಮ್ಮ ಪ್ರತಿಭೆಯನ್ನು ತೋರಿಸಲು ಮತ್ತು ಪತ್ರಿಕಾ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಂತರರಾಷ್ಟ್ರೀಯ ಪ್ರಸಾರವನ್ನು ಪಡೆಯಲು ಉತ್ಸವವು ದೊಡ್ಡ ವೇದಿಕೆಯನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ.
ಈ ಉತ್ಸವಕ್ಕಾಗಿ 6 ತಿಂಗಳಿನಿಂದ ತಯಾರಿ ನಡೆಯುತ್ತಿದೆ. ಪ್ರತಿ ವರ್ಷ ಕೈಟ್ ಫೆಸ್ಟಿವಲ್ ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಬೆಳಗಾವಿ ಕೈಟ್ ಫೆಸ್ಟಿವಲ್ ಗೆ ಬರುವಷ್ಟು ಜನ ಎಲ್ಲಿ ಬರೊದಿಲ್ಲ. ಬೇರೆ ರಾಜ್ಯದಿಂದ ಕೋಡ ಜನ ಬರುತ್ತಿದ್ದಾರೆ. ಸಾಕಷ್ಟು ಹೋಸ ಗಾಳಿ ಪಟ ನೋಡಬಹುದು ಎಂದು ಶಾಸಕ ಅಭಯ ಪಾಟೀಲ ಅವರು ತಿಳಿಸಿದರು. ‌
TV24 News Desk
the authorTV24 News Desk

Leave a Reply