ಖಾನಾಪೂರ : ತಾಲೂಕಿನ ಚಾಪೋಲಿ ಗ್ರಾಮದ ರೈತರಿಗೆ ಕಾಡುಹಂದಿ ಹಾವಳಿ ಹೆಚ್ಚಾಗಿದ್ದು, ನಿನ್ನೆ ಕಾಡುಹಂದಿ ದಾಳಿಯಿಂದ ರೈತನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಂಗಾರಾಮ್ ಧುಳು ಶೆಳಕೆ (70) ಗಾಯಗೊಂಡ ರೈತ. ನಿನ್ನೆ ಗವಳಿವಾಡದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ತಮ್ಮ ಜಮೀನಿಗೆ ತೆರಳುತ್ತಿದ್ದರು. ಗಂಗಾಧರ್ ತಮ್ಮ ಜಮೀನಿನಲ್ಲಿ ಭತ್ತ, ಮೆಣಸಿನಕಾಯಿ ಬೆಳೆದಿದ್ದಾರೆ. ಕಾಡುಹಂದಿಯಿಂದ ಬೆಳೆ ರಕ್ಷಣೆಗೆ ತೆರಳುತ್ತಿದ ವೇಳೆ ಏಕಾಏಕಿ ಕಾಡು ಹಂದಿ ದಾಳಿ ಮಾಡಿದೆ. ಗಂಗಾರಾಮ್ ಕೈಯಲ್ಲಿ ಕೋಲು ಹಿಡಿದು ಕಾಡುಹಂದಿ ಓಡಿಸಲು ಪ್ರಯತ್ನಿಸಿದರೂ ಬಳಿಕ ಕಾಡು ಹಂದಿ ಕಾಡಿಗೆ ಓಡಿಹೋಗಿದೆ. ಈ ದಾಳಿಯಲ್ಲಿ ಗಂಗಾರಾಮ್ ಅವರ ಕಾಲು ಮತ್ತು ತೊಡೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.