ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯ

2 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಸರ್ಕಾರ ಕಾಳ ಸಂತೆಯಲ್ಲಿ ಮಾರಿಕೊಂಡಿದೆ:ನಡಹಳ್ಳಿ

ಬೆಳಗಾವಿ:

ಎರಡು ಲಕ್ಷ ಮೆಟ್ರಿಕ್ ಟನ್ ಗೊಬ್ಬರನ್ನು ಸರ್ಕಾರ ಕಾಳಸಂತೆಯಲ್ಲಿ ಮಾರಿಕೊಂಡಿದೆ ಎಂದು ಸರ್ಕಾರದ ವಿರುದ್ಧ
ಬೆಳಗಾವಿಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯದ್ಯಕ್ಷ ಎ ಎಸ್ ಪಾಟೀಲ್ ನಡಹಳ್ಳಿ ಆರೋಪ‌ ಮಾಡಿದರು.ಹೆಗಲಿಗೆ ಬಾರುಕೋಲು ಹಾಕಿಕೊಂಡು ಕುಳಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಹೆಗಲಿಗೆ ಬಾರುಕೋಲು ಹಾಕಿ ಮಾತನಾಡಿದರು ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಷ್ಟದ ದುಸ್ಥಿಗೆ ಒಳಗಾಗಿದ್ದು ರೈತ ಸಮುದಾಯ.
ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿ ರೈತನನ್ನು ಮೂಲವಾಗಿಟ್ಟುಕೊಂಡಿತ್ತು.
ಯಡಿಯೂರಪ್ಪನವರು ರೈತರನ್ನೆ ಮೂಲ ಕೇಂದ್ರವನ್ನಾಗಿ ಇಟ್ಟುಕೊಂಡು ಆಡಳಿತ ಮಾಡಿದ್ದರು.ಕಾಂಗ್ರೇಸ್ ಅಧಿಕಾರಕ್ಕೆ ಬಂದ ತಕ್ಷಣ ರೈತನ ದುಸ್ತಿತಿ ಪ್ರಾರಂಭ ಆಯ್ತು ಎಂದು ಆರೋಪಿಸಿದರು. ರೈತರಿಗೆ ಬರುವ ನಾಲ್ಕು ಸಾವಿರ ರೂ ಕಟ್ ಮಾಡಿದ್ರು ರೈತನ ಹೊಲಕ್ಕೆ ನೀರು ಕೊಡಲು ತಂದ ಯೋಜನೆ ಬಂದ್ ಮಾಡಿದರು. ಬಸವರಾಜ್ ಬೊಮ್ಮಾಯಿ ರೈತರ ಮಕ್ಕಳಿಗೆ ವಿದ್ಯಾನಿಧಿ ಯೊಜನೆ ಜಾರಿಗೆ ತಂದಿದ್ದರು ಅದನ್ನು ಸಹ ಬಂದ್ ಮಾಡಲಾಯ್ತು ಇದರಿಂದ ಸುಮಾರು 23 ಲಕ್ಷ ಕುಟುಂಬಗಳಿಗೆ ಲಾಭ ಆಗುತ್ತಿತ್ತು ಎಂದರು. ಅಲ್ಲದೆ ಒಂದು ಎರಡು ಹಸುಗಳನ್ನು ಕಟ್ಟಿಕೊಂಡು ಜೀವನ ಮಾಡ್ತಿದ್ದ ರೈತರಿಗೆ ನಾವಿದ್ದಾಗ 5 ರೂ ಬೆಂಬಬಲ‌‌ ಬೆಲೆ ಕೊಡುತ್ತಿದ್ದೆವು ಕಾಂಗ್ರೇಸ್ 7 ರೂ ಕೊಡ್ತಿವಿ ಎಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು ಆದರೆ ಸಾವಿರಾರು ರೂ ಇಂದು ರೈತರಿಗೆ ನೀಡದೆ ಬಾಕಿ ಉಳಿಸಿಕೊಂಡಿದೆ ಎಂದರು.ರೈತರಿಗೆ ಕೊಡುವ ಯಂತ್ರೋಪಕರಣಗಳು ಸಲಕರಣೆಗಳ ಯೋಜನೆ ಬಂದ್ ಮಾಡಲಾಗಿದೆ‌ ರೈತರಿಗೆ ಡಿಸೇಲ್ ಸಬ್ಸಿಡಿ ಕೊಡ ಮಾಡಲಾಗುತ್ತಿತ್ತು.
ಸಿರಿದಾನ್ಯಕ್ಕೆ ಒಂದು‌ ಹೆಕ್ಟರ್ ಗೆ 10 ಸಾವಿರ ಕೊಡ್ತಿದ್ದರು‌ ಅದನ್ನು‌ ನಿಲ್ಲಿಸಿಬಿಟ್ಟರು ಬೆಳೆ ನಷ್ಟವಾದ ಸಂದರ್ಭದಲ್ಲಿ ಫಸಲ್‌ ಭೀಮಾ ಯೋಜನೆಯನ್ನು ನಿರ್ಲಕ್ಷ ಮಾಡಿತು‌.ಕೇಂದ್ರ ಸರ್ಕಾರ 3454 ಕೋಟಿ ಹಣವನ್ನು ಪರಿಹಾರವಾಗಿ ಬಿಡುಗಡೆ ಮಾಡಿತ್ತು.ಆ ಪರಿಹಾರದ ಹಣವನ್ನು‌ ಒಂದೇ ಒಂದು ರೂ ರೈತರಿಗೆ ಈ ಸರ್ಕಾರ ಕೊಡಲಿಲ್ಲ.3400 ರೈತರು ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಧಾರವಾಡ ಅದರಲ್ಲಿ ಮೊದಲನೇ ಸ್ಥಾನದಲ್ಲಿದೆ
ನಕಲಿ ಬೀಜಗಳ ಹಾವಳಿ ಜೋರಾಗಿದೆ ಅದಕ್ಕಾಗಿ ಹೋರಾಟ ಮಾಡಿದ್ರೂ ಸಹ ಒಂದು ರೂ ಪರಿಹಾರ ‌ಕೊಡಲಿಲ್ಲ ಎಂದರು.
ದಾವಣಗೆರೆ ಹಾಗೂ ಹಾಸನದಲ್ಲಿ ಮೆಕ್ಕೆಜೋಳಕ್ಕೆ ಕೊಡುವ ಬೀಜಗಳು ಬಿಳುಚು ಒಡೆದಿವೆ.
ಮೌಲ್ಯಮಾಪನ ಮಾಡುವ ಕಂಪನಿಗಳು ದುಡ್ಡು ಕೊಟ್ಟರೆ ಸರ್ಟಿಫಿಕೆಟ್ ಕೊಡುತ್ತವೆ.
ನಕಲಿ ಗೊಬ್ಬರ ತಯಾರು ಮಾಡುವ ಕಂಪನಿಗಳ ಸಂಖ್ಯೆ ಹೆಚ್ಚಾಗಿದೆ.ರಾಯಚೂರಿನಲ್ಲಿ 9 ನಕಲಿ ಗೊಬ್ಬರ ತಯಾರು‌ ಮಾಡುವ ಕಂಪನಿಗಳ ಮೇಲೆ ಕೇಸ್ ಆಗಿದೆ ನಾವು ಇದನ್ನು ಖಂಡಿಸಿ ಹೋರಾಟ ಮಾಡಿದ್ದೆವೆ ಈ ಹೋರಾಟ ಸಾಂಕೇತಿಕವಲ್ಲ.
ಇದನ್ನ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವರೆಗೆ ಹೋರಾಟ ಮಾಡ್ತಿವಿ ಎಂದರು.ಇನ್ನು ಕೃಷಿ ಮಂತ್ರಿ ಅಥವಾ ಸರ್ಕಾರ ನಡೆಸೋರಿಗೆ ಸ್ವಲ್ಪವಾದರೂ ಜ್ಞಾನ ಬೇಕು‌.
ಬೌಗೋಳಿಕವಾಗಿ ವ್ಯತ್ಯಾಗಳಿವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕೃಷಿ ಮಂತ್ರಿಯ ಕೆಲಸ ಮೂರು ತಿಂಗಳಿಗೊಮ್ಮೆ ಹೋಗಿ ರಿವೀವ್ ಮಾಡಬೇಕು ಯಾವ ಗೊಬ್ಬರ ಸ್ಟೋರ್ ಮಾಡಬೇಕು ಎನ್ನುವುದು ಕೃಷಿ ಮಂತ್ರಿಗೆ ಇರಬೇಕು.
ರೈತರೊಂದಿಗೆ ಸಂಪರ್ಕ ಮಾಡಿದಾಗ ಮಾತ್ರ ಇದು ಗೊತ್ತಾಗುತ್ತೆ.ಆದರೆ ರಾಜ್ಯದ ಕೃಷಿ ಮಂತ್ರಿ ಬೆಂಗಳೂರು ಮತ್ತು ಮಂಡ್ಯ ಬಿಟ್ಟು ಬೇರೆ ಜಿಲ್ಲೆಗೆ ಕಾಲಿಟ್ಟಿಲ್ಲ ಈ ಬಾರಿ ಉತ್ತಮವಾದ ಮಳೆಯಾಗಿದೆ.ಹತ್ತು ಜಿಲ್ಲೆಗಳಲ್ಲಿ ಆಹಾರ ಮೆಕ್ಕೆಜೋಳ ಧಾನ್ಯಗಳನ್ನು‌ ಬೆಳೆಯಲಾಗಿದೆ.
ಕಷ್ಟ ಬಂದರೆ ಮೋದಿ ಮತ್ತು‌ ಕೇಂದ್ರ ಸರ್ಕಾರದ ಕಡೆ ರಾಜ್ಯ ಸರ್ಕಾರದವರು ಬೊಟ್ಟು ಮಾಡ್ತಾರೆ. ಕೇಂದ್ರ ಸರ್ಕಾರ ಈಗಾಗಲೇ 12 ಲಕ್ಷ 90 ಸಾವಿರ ಮೆಟ್ರಿಕ್ ಟನ್ ಗೊಬ್ಬರ ನೀಡಿದೆ.
11 ಲಕ್ಷದ 7 ಸಾವಿರ ಮೆಟ್ರಿಕ್ ಟನ್ ರಾಜ್ಯ ಸರ್ಕಾರಕ್ಕೆ ಈಗಾಗಲೇ ಕೇಂದ್ರ ನೀಡಿದೆ. ಅದರಲ್ಲಿ 8 ಲಕ್ಷದ 73 ಸಾವಿರ ಮೆಟ್ರಿಕ್ ಟನ್ ಈಗಾಗಲೇ ಲಿಫ್ಟ್ ಆಗಿದೆ.ಅದರಲ್ಲಿ 7 ಲಕ್ಷ ಟನ್ ಈಗಾಗಲೇ ಅನ್ ಲೋಡ್ ಆಗಿದೆ.ಅದರಲ್ಲಿ 5 ಲಕ್ಷ ಟನ್ ಮಾತ್ರ ರೈತರಿಗೆ ‌ಹಂಚಿಕೆ ಆಗಿದೆ ಬಾಕಿ ಕಾಳ ಸಂತೆಯಲ್ಲಿ ಸರ್ಕಾರ ಮಾರಿಕೊಂಡಿದೆ ಎಂದು ನಡಹಳ್ಳಿ ಆರೋಪಿಸಿದರು.
2 ಲಕ್ಷ‌ ಮೆಟ್ರಿಕ್ ಟನ್ ಗೊಬ್ಬರ ಕಾಳ ಸಂತೆಯ ಪಾಲಾಗಿದೆ ಎಂದ ನಡಹಳ್ಳಿ ಬಾಕಿ ಇನ್ನೊಂದು ಲಕ್ಷ ಟನ್ ಮಾತ್ರ ಲಿಫ್ಟ್ ಆಗಬೇಕು.
ಮೋದಿ ಗೊಬ್ಬರ ಕೊಡಲು ವಿಫಲರಾಗಿದ್ದಾರೆ ಅಂತ ಚಲುರಾಯಸ್ವಾಮಿ ಆರೋಪ ಮಾಡ್ತಾರೆ ಯಾಯ್ಯಾವ ಗೊಬ್ಬರ ಎಲ್ಲೆಲ್ಲಿ ಸ್ಟಾಕ್ ಆಗಿದೆ ಅನ್ನೋದನ್ನ ಪರಿಶೀಲನೆ ಮಾಡಿಕೊಳ್ಳಿ ಎಂದರು.
ಗೊಬ್ಬರದ ಅಭಾವ ಇಲ್ಲ ನಮ್ಮಲ್ಲಿ ಸ್ಟಾಕ್ ಇದೆ ಅಂತ ಹೇಳ್ತಾರೆ.
ಆದರೆ ವಾಸ್ತವ ತೆಗೆದು ನೋಡಿದರೆ ಸ್ಟಾಕ್ ಇಲ್ಲ ಅಂತಾರೆ. ಫಿಸಿಕಲಿ ಎಲ್ಲೂ ಸ್ಟಾಕ್ ಇಲ್ಲ ಎಂದು ನಡಹಳ್ಳಿ ಆರೋಪಿಸಿದರು.
ಹಾಗಾದರೆ ಗೊಬ್ಬರ ಎಲ್ಲಿ ಹೋಯ್ತು ಎಂಬ ಮಾಧ್ಯಮಗಳ ಪ್ರಶ್ನೆ ಮಾಡಿದಾಗ ಅದಕ್ಕಾಗಿಯೇ ನಾವು ಹೋರಾಟ ಮಾಡ್ತಿರೋದು ಎಂದ ನಡಹಳ್ಳಿ ಹೇಳಿದರು.

TV24 News Desk
the authorTV24 News Desk

Leave a Reply