ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದ ಬಳಿ ಶನಿವಾರ ರಾತ್ರಿ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೋಕಿತ್ಕರ್ ಹಾಗೂ ಹಿಂದೂ ರಾಷ್ಟ್ರ ಸೇನಾ ಮುಖಂಡ ಮನೋಜ್ ದೇಸೂರಕರ್ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣ ಸಂಬಂಧ ನಗರ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣ ರಾಜಕೀಯ ತಿರುವು ಪಡೆಯುವ ಮುನ್ನವೇ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಈ ಪ್ರಕರಣ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಡಾ. ಬೊರಲಿಂಗಯ್ಯ ಅವರು, ನಿನ್ನೆ ಸಂಜೆ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆ ಮತ್ತು ಗ್ರಾಮೀಣ ಪೊಲೀಸ್ ಠಾಣೆ ಮದ್ಯೆ ರವಿ ಕೋಕೀತಕ್ ಹಾಗೂ ಅವರ ಕಾರು ಚಾಲಕರಿಗೆ ರೋಡ್ ಹಂಪ್ ಹತ್ತಿರ ಫೈರೀಂಗ್ ಮಾಡಲಾಗಿದೆ. ಸದ್ಯ ರವಿ ಕೋಕಿತ್ಕರ್ ಅವೆ ಕಾರು ಚಾಲಕ ಅರಮಾ ಆಗಿದ್ದಾರೆ.
ಘಟನೆ ಆಗುತ್ತಿದ್ದಂತೆ ನಾವು ಈ ಪ್ರಕರಣವನ್ನು ಭೇದಿಸಿ 18 ಗಂಟೆಯಲ್ಲಿ ಅಪರಾಧಿಗಳನ್ನು ಬಂಧಿಸಲಾಗಿದೆ. ಅಭಿಜಿತ ಸೋಮನಾಥ ಬಾತಖಾಂಡೆ ( 41) ರಾಹುಲ ನಿಂಗಾಣಿ ಕೊಡಚವಾಡ ( 32 ) ಜ್ಯೋತಿಬಾ ಗಂಗಾರಾಮ ಮುತಗೇಕರ (25)ಎಂಬ ಆರೋಪಿಗಳ ಬಂದನ ಮಾಡಲಾಗಿದೆ. ತನಿಖೆ ನಡೆಯುತ್ತಿದೆ. ಈ ಫೈರೀಂಗ್ ಮಾಡುದಾಗಿ ಒಪ್ಪಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧ ಅವರಲ್ಲಿ ಹಣಕಾಸಿನ ವ್ಯವಹಾರ ಇತ್ತು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಪ್ರಕರಣದಲ್ಲಿ ಎಸಿಪಿ, ಡಿಸಿಪಿ ಹಾಗೂ ಸಿಬ್ಬಂದಿಗೆ ಧನ್ಯವಾದಗಳು ತಿಳಿಸುತ್ತೇನೆ. ಇನ್ನು ಮುಂದೆ ತನಿಖೆ ನಡೆಯುತ್ತಿದ್ದು, ಗನ್ ಲೈಸೆನ್ಸ್ ಅವರಲ್ಲಿ ಇಲ್ಲ ಎಂದು ಪ್ರಾಥಮಿಕ ತನಿಖೆ ಪ್ರಕರಣ ಕಂಡು ಬಂದಿದೆ.








