ಬೆಳಗಾವಿ: ಸದಾಶಿವನಗರದ ಅಪಾರ್ಟಮೆಂಟನ ೩ನೇ ಮಹಡಿಯ ತನ್ನ ಬೆಡ್ ರೂಮಲ್ಲಿ ಬಿಬಿಎ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂದಿನಿ ಅನ್ನಮಪಲ್ಲಿ (೨೩ ) ರಾಯಚೂರು ಎಂದು ಗುರುತಿಸಲಾಗಿದೆ. ರಾಯಚೂರು ಮೂಲದ ನಂದಿನಿ ಖಾಸಗಿ ಕಾಲೇಜನಲ್ಲಿ ಬಿಬಿಎ ೩ನೇ ವರ್ಷ ವ್ಯಾಸಾಂಗ ಮಾಡುತ್ತಿದ್ದಳು. ಇಂದು ಸಾಯಂಕಾಲ ಯಾವುದೇ ವಿಷಯದ ಬಗ್ಗೆ ಅಣ್ಣನೊಂದಿಗೆ ಜಗಳವಾಡಿ ಬಾಗಿಲು ಬಂದು ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ತಿಳಿದುಬಂದಿದೆ. ಸದ್ಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಎಪಿಎಂಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
tv24plus.in > Blog > ಜಿಲ್ಲೆ > ಬೆಳಗಾವಿ > ಬಿಬಿಎ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ