Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
Uncategorized

ಮಹಾ ರಾಜ್ಯಪಾಲ, ಬಿಜೆಪಿ ವಕ್ತಾರರ ಪ್ರತಿಕೃತಿ ದಹಿಸಿ ಪ್ರತಿಭಟನೆ

ಖಾನಾಪುರ: ಶಿವಾಜಿ ಮಹಾರಾಜರ ವಿರುದ್ದ ವಿವಾದಾತ್ಮಕ ಹೇಳಿಕೆ ಖಂಡಿಸಿ ಖಾನಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ತಹಶಿಲ್ದಾರ ಕಛೇರಿ ಎದುರುಗಡೆ ವೃತ್ತದಲ್ಲಿ  ಮಹಾರಾಷ್ಟ್ರ ರಾಜ್ಯಪಾಲ  ಭಗತ್ ಸಿಂಗ್ ಕೊಶ್ಯಾರಿ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಸುಧಾಂಶು ತ್ರಿವೇದಿಯವರ ಪ್ರತಿಕೃತಿ ದಹನ ಮಾಡಿ ನಂತರ ತಹಶಿಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಖಾನಾಪುರ ಕಾಂಗ್ರೆಸ್ ಅಧ್ಯಕ್ಷರಾದ ಮಹಾದೇವ ಕೋಳಿ ಇತಿಹಾಸ ಮಹಾಪುರುಷರ ಬಗ್ಗೆ ಉನ್ನತ ಹುದ್ದೆಯಲ್ಲಿರುವ ಈ ಇಬ್ಬರು ಅವಮಾನವಾಗುವಂತೆ ಮಾತನಾಡಿರುತ್ತಾರೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಮಾತನಾಡಿರುವದು ಖಂಡನೀಯ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.  ಈ ಸಂದರ್ಭದಲ್ಲಿ ಖಾನಾಪುರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರತಿಕೃತಿ ಅವಶೇಷ ಸ್ವಚ್ಛಗೊಳಿಸಿದ ಪೋಲಿಸ್
ಇನ್ನು ಕಾಂಗ್ರೆಸ್ ಕಾರ್ಯಕರ್ತರು ವೃತ್ತದ ಮಧ್ಯೆ ಪ್ರತಿಕೃತಿ ದಹಸಿ ಹೊರಟಹೋದಾಗ ಸಂಚಾರಕ್ಕೆ ಅಡಚಣೆ ಆಗುತ್ತಿದ್ದನ್ನು ಕಂಡ ಪೋಲಿಸ್ ಸಿಬ್ಬಂದಿಗಳು ಸ್ವಚ್ಛಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಆದರೆ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ತಕ್ಕೆ ಮಾಡುವ ಪ್ರತಿಭಟನೆಗಳಿಗೆ ಪೋಲಿಸ್ ಸಿಬ್ಬಂದಿಗಳ ಕೈಯಲ್ಲಿ ಸ್ವಚ್ಛಗೊಳಿಸಿದ್ದು ಎಷ್ಟರ ಮಟ್ಟಿಗೆ ಸರಿ ಎನ್ನುವದು ನಾಗರೀಕರ ಪ್ರಶ್ನೆಯಾಗಿದೆ
TV24 News Desk
the authorTV24 News Desk

Leave a Reply

error: Content is protected !!