ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಗಣೇಶ ಮೆರವಣಿಗೆ ವೇಳೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಆರು ಆರೋಪಿಗಳ ಬಂಧನ!

ಬೆಳಗಾವಿ:

ಗಣೇಶ ಮೆರವಣಿಗೆಯಲ್ಲಿ ಲಾಂಗು‌ಮಚ್ಚು ಝಳುಪಿಸಿದ್ದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಶಿವಾಜಿ ಸರ್ಕಲ್ ನಲ್ಲಿ ಗಣೇಶ ಮೆರವಣಿಗೆ ವೇಳೆ ಘಟನೆ ನಡೆದಿತ್ತು.ಯುವಕನ ಮೇಲೆ ಹಲ್ಲೆ ಮಾಡಿದ್ದ ಆರು ಯುವಕರನ್ನು ಸದಲಗಾ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು
ನಿತೀನ್ ಹುಕ್ಕೀರಿ,ಚಂದ್ರಕಾಂತ ಡೋಣೆ,ನಿರಂಜನ್ ಗಾವಡೆ,ಪ್ರತೀಕ್ ಘಾಟ್,ಆದಿತ್ಯ ಘಾಟ್,ಇಂದ್ರಜೀತ್ ಜಾಧವ್ ಎಂದು ಗುರುತಿಸಲಾಗಿದೆ.
ಮಾರಕಾಸ್ತ್ರ ಹಿಡಿದು ಗಣೇಶ ಮೆರವಣಿಗೆಗೆ ಬಂದಿದ್ದ ಕಿರಾತಕರ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ತೇಜಸ್ ಪಾಂಡುರಂಗ ಬೀಡಿಕರ್ ಎಂಬಾತನ ಯುವಕರು ಸೇರಿ ಹಲ್ಲೆ ಮಾಡಿದ್ದರು.ಸದ್ಯ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಸದಲಗಾ ಪೊಲೀಸರು ಯಶಸ್ವಿಯಾಗಿದ್ದು
ಸದಲಗಾ ಪೊಲೀಸ್ ಠಾಣಾ ಈ ಕುರಿತು ಪ್ರಕರಣ ದಾಖಲಾಗಿದೆ.

TV24 News Desk
the authorTV24 News Desk

Leave a Reply

error: Content is protected !!