


ಬೆಳಗಾವಿ:
ಇಡಿ ದಾಳಿಯ ಬೆನ್ನಲ್ಲೆ ಸಚಿವ ಸತೀಶ್ ಜಾರಕಿಹೊಳಿ ಕುರಿತು ಮಾಧ್ಯಮಗಳಲ್ಲಿ ತರಹೇವಾರಿ ಚರ್ಚೆಗಳು ಶುರುವಾಗಿವೆ. ಸತೀಶ್ ಗೆ ಇಡಿ ನೋಟಿಸ್ ನೀಡುತ್ತೆ ಹಾಗಾಗುತ್ತೆ ಹೀಗಾಗುತ್ತೆ ಅಂತ ಸೋಷಿಯಲ್ ಮೀಡಿಯಾ ತಂತ್ರಜ್ಞರು ತರವೇವಾರಿ ಚರ್ಚೆಯಲ್ಲಿ ತೊಡಗಿದ್ದಾರೆ. ಆದರೆ ಇವುಗಳಿಗೆಲ್ಲ ಗೋಲಿ ಮಾರೋ ಎಂದಿರುವ ಸಚಿವ ಸತೀಶ್ ಜಾರಕಿಹೊಳಿ ತಮ್ಮದೇ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಎಂದಿನಂತೆ ಗೋಕಾಕನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಕೂಲ್ ಆಗಿ ಕಾಣಿಸಿಕೊಂಡಿದ್ದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಕ್ಕಳೊಂದಿಗೆ ಕ್ರಿಕೇಟ್ ಆಡುವುದರ ಮೂಲಕ ಎಂಥದೆ ಪರಿಸ್ಥಿತಿ ಬಂದರೂ ತಾವು ಅದನ್ನು ಎದರಿಸುತ್ತೆವೆ ಎನ್ನುವ ಗಟ್ಟಿ ಸಂದೇಶ ಸಾರಿದ್ದಾರೆ. ಎಂತಹ ಪರಿಸ್ಥಿತಿಯಲ್ಲೂ ಸಹ ಕೂಲ್ ಆಗಿರುವುದು ಸಚಿವ ಸತೀಶ್ ಜಾರಕಿಹೊಳಿಯವರ ವೈಶಿಷ್ಟ್ಯವಾಗಿದ್ದು ಇಡಿ ದಾಳಿಯ ನಂತರವೂ ಸಹ ಅವರೂ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ.












