


ಬೆಳಗಾವಿ:
ಅಥಣಿಯಲ್ಲಿ ಟ್ರಾಫಿಕ್ ಪೊಲೀಸರ ಎಇ ಕ್ಯಾಮೆರಾ ಯಡವಟ್ಟು ಮಾಡಿದೆ ಎಡವಟ್ಟು ಎನ್ನುವುದಕ್ಕಿಂತ ಇದನ್ನು ಕಿತಾಪತಿ ಎಂದರೆ ತಪ್ಪಾಗಲಾರದು.ಎಐ ಕ್ಯಾಮರಾ ಮಾಡಿದ ಕಿತಾಪತಿಯಿಂದ ಈಗ ಕಾರ್ ಮಾಲೀಕರು ಹೆಲ್ಮೆಟ್ ಹಾಕಿಕೊಂಡು ಓಡಾಡುವಂತಹ ಸ್ಥಿತಿ ಎದುರಾಗಿದೆ.ಕಾರ್ ಮಾಲೀಕನಿಗೆ ನೋ ಹೆಲ್ಮೆಟ್ ದಂಡವನ್ನು ಎಇ ಕ್ಯಾಮೆರಾ ವಿಧಿಸಿದೆ.ಕಾರಿನಲ್ಲಿ ಹೆಲ್ಮೆಟ್ ಹಾಕಿಲ್ಲ ಎನ್ನುವುದಕ್ಕೆ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ನಿವಾಸಿ ಸುಭಾಷ್ ಬೋಜನೆ ಎಂಬಾತರಿಗೆ ಎಐ ಕ್ಯಾಮರಾ ಶಾಕ್ ನೀಡಿದೆ.ಪಟ್ಟಣದ ಅಂಬೇಡ್ಕರ್ ಸರ್ಕಲ್ ನಲ್ಲಿ ಕಾರಿನಲ್ಲಿ ಹೆಲ್ಮೆಟ್ ಹಾಕಿಲ್ಲ ಎಂಬುದಕ್ಕೆ ದಂಡ ವಿಧಿಸಲಾಗಿದೆ.ಅಲ್ಲದೆ ದಂಡ ವಿಧಿಸಿದ ಹಾಗೂ ನಿಯಮ ಉಲ್ಲಂಘಿಸಿದ ಸಂದೇಶ ಕಾರ್ ಮಾಲೀಕನ ವಾಟ್ಸಪ್ ಗೆ ಬಂದಿದೆ. ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ 500₹ ದಂಡ ವಿಧಿಸಿದೆ.ಬೆಳಗಾವಿ ಜಿಲ್ಲಾ ಸಂಚಾರ ಪೊಲೀಸರ ದಂಡಕ್ಕೆ ಕಾರ್ ಮಾಲೀಕ ತಬ್ಬಿಬ್ಬಾಗಿದ್ದು
ಹೆಲ್ಮೆಟ್ ಹಾಕೊಂಡು ಕಾರ್ ಓಡಿಸಿ ಎಐ ಕ್ಯಾಮರಾ ಅವಾಂತರವನ್ನು ಕಾರು ಮಾಲೀಕ ಬಿಚ್ಚಿಟ್ಟಿದ್ದಾನೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಾರ್ ಮಾಲೀಕ ಸುಭಾಷ್ ಬೋಜನೆ ವಿಡಿಯೋ ವೈರಲ್ ಆಗುತ್ತಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.











