


ಬೆಳಗಾವಿ:
ಪರಪುರುಷನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಐನಾತಿಯೊಬ್ಬಳು ಗಂಡನ ಕೊಂದು ಅಪಘಾತದ ಡ್ರಾಮಾ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಐನಾತಿ ಪತ್ನಿ ಹಾಗೂ ಆತನ ಪ್ರೀಯಕರನನ್ನು ಪೊಲೀಸರು ಬಂಧಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖಿಳೆಗಾಂವ ಗ್ರಾಮದಲ್ಲಿ ಘಟನೆ ನಡೆದಿದ್ದು ಚಂದ್ರಕಾಂತ ಶಿವಪೂಜೆ(41) ಕೊಲೆಯಾದ ದುರ್ದೈವಿಯಾಗಿದ್ದು ಆತನ ಪತ್ನಿ ರೇಣುಕಾ ಶಿವಪೂಜೆ ಮತ್ತು ಪ್ರಿಯಕರ ಮಹಾಂತೇಶ್ ದನಾಳೆಯೇ ಕೊಲೆ ಆರೋಪಿಗಳಾಗಿದ್ದು ಅವರನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.ಕಳೆದ ಆಗಸ್ಟ್ 8ರಂದು ಬೈಕ್ ಮೇಲೆ ಹೋಗ್ತಿದ್ದ ಪತಿಯನ್ನು ಕೊಂದು ಅಪಘಾತ ಎಂದು ಬಿಂಬಿಸಲು ಪತ್ನಿ ರೇಣುಕಾ ಯತ್ನಿಸಿದ್ದಳು.
ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು ಕಬ್ಬು ಕಟಾವು ಗ್ಯಾಂಗ್ ಕಟ್ಟಿಕೊಂಡು ಚಂದ್ರಕಾಂತ ಮತ್ತು ಮಹಾಂತೇಶ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಚಂದ್ರಕಾಂತ ಪತ್ನಿ ರೇಣುಕಾಳ ಪರಿಚಯ ಮಹಾಂತೇಶಗೆ ಆಗಿತ್ತು ಎನ್ನಲಾಗಿದೆ.ಎರಡು ವರ್ಷದಿಂದ ರೇಣುಕಾ ಮಹಾಂತೇಶ್ ನಡುವೆ ಅನೈತಿಕ ಸಂಬಂಧವನ್ನೂ ಹೊಂದಿದ್ದರು ಎನ್ನಲಾಗಿದ್ದು ಈ ವಿಚಾರ ಕೆಲ ದಿನಗಳ ಹಿಂದೆ ಗಂಡ ಚಂದ್ರಕಾಂತಗೆ ಗೊತ್ತಾಗಿತ್ತು ಎನ್ನಲಾಗಿದೆ.ಹಿರಿಯರ ಸಮ್ಮುಖದಲ್ಲಿ ಈ ವಿಚಾರ ರಾಜಿ ಸಂಧಾನವಾಗಿತ್ತು ಇಷ್ಟಾದರೂ ಮಹಾಂತೇಶ್ ಜೊತೆಗೆ ಪತ್ನಿ ರೇಣುಕಾ ಸಂಪರ್ಕದಲ್ಲಿದ್ದಳು.
ಇದರಿಂದ ಪತ್ನಿಗೆ ಚಂದ್ರಕಾಂತ ನಿತ್ಯ ಕಾಟ ಕೊಡಲಾರಂಭಿಸಿದ್ದ
ಯಾವಾಗ ಗಂಡ ಕಾಟ ಕೊಡಲು ಆರಂಭಿಸಿದನೋ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆಗೆ ಪತ್ನಿ ಹಾಗೂ ಪ್ರೀಯಕರ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.
ಗಂಡನಿಗೆ ಮಾರುಕಟ್ಟೆಗೆ ಹೋಗಿ ಬಾ ಎಂದು ಕಳ್ಸಿದ್ದ ಪತ್ನಿ ರೇಣುಕಾ ಬಳಿಕ ಪ್ರಿಯಕರ ಮಹಾಂತೇಶ್ ಗೆ ಕರೆ ಮಾಡಿ ಗಂಡ ಹೊರಟ ವಿಚಾರ ತಿಳಿಸಿದ್ದಳು ಎಬ್ನಲಾಗಿದೆ. ಊರಿಂದ ಎರಡು ಕಿಮೀ ದೂರ ಬರ್ತಿದ್ದಂತೆ ಬೈಕ್ ಅಡ್ಡಗಟ್ಟಿ ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಹಾಂತೇಶ್ ಚಂದ್ರಕಾಂತನನ್ನು ಕೊಲೆ ಮಾಡಿಸಿದ್ದಳು.ಬಳಿಕ ತನ್ನ ಗಂಡನಿಗೆ ಅಪಘಾತ ಆಗಿದೆ ಎಂದು ಅಥಣಿ ಪೊಲೀಸ್ ಠಾಣೆಗೆ ಹೋಗಿದ್ದಳು.ಈ ವೇಳೆ ಪತ್ನಿಯ ಡ್ರಾಮಾ ಕಂಡು ಸಂಶಯಗೊಂಡು ಚಂದ್ರಕಾಂತ ಕುಟುಂಬಸ್ಥರಿಂದ ಪೊಲೀಸರು ದೂರು ಪಡೆದಿದ್ದರು.ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ವೇಳೆ
ಪತಿಯನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿದ ಪತ್ನಿ ಆ್ಯಂಡ್ ಪ್ರಿಯಕರ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









