







ಬೆಳಗಾವಿ: ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ 13 ಜನ ಮಾಧ್ಯಮ ಪ್ರತಿನಿಧಿಗಳಿಗೆ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಜಿಲ್ಲಾ ಪಂ ಸಿಇಒ ರಾಹುಲ್ ಶಿಂಧೆ 13 ಜನ ಮಾಧ್ಯಮ ಸ್ನೇಹಿತರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.
ಸನ್ಮಾನಿತರ ವಿವರ:
ಮುದ್ರಣ ಮಾಧ್ಯಮ ವಿಭಾಗ:
ದಿ ಹಿಂದೂ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕರಾದ ಹೃಷಿಕೇಶ ಬಹದ್ದೂರ ದೇಸಾಯಿ, ಕನ್ನಡಪ್ರಭ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಬ್ರಹ್ಮಾನಂದ ಹಡಗಲಿ,, ಪ್ರಜಾವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಇಮಾಮಹುಸೇನ್ ಗೂಡುನವರ, ಲೋಕದರ್ಶನ ದಿನಪತ್ರಿಕೆಯ ಛಾಯಾಗ್ರಾಹಕರಾದ ವಿಶ್ವನಾಥ ದೇಸಾಯಿ,
ವಿದ್ಯುನ್ಮಾನ ಮಾಧ್ಯಮ ವಿಭಾಗ:
ಆರ್.ಕನ್ನಡ ಜಿಲ್ಲಾ ವರದಿಗಾರರಾದ ಮೈಲಾರಿ ಪಟಾತ್, ಚಿಕ್ಕೋಡಿನ್ಯೂಸ್ 18 ವರದಿಗಾರರಾದ ಲೋಹಿತ್ ಶಿರೋಳ, ಸುವರ್ಣ ನ್ಯೂಸ್ ಕ್ಯಾಮರಾಮನ್ ಅಡಿವೆಪ್ಪ ಪಾಟೀಲ, ಟಿ.ವಿ.9 ಸಂಸ್ಥೆಯ ಕ್ಯಾಮರಾಮನ್ ಸದಾಶಿವ ಜಾಧವ.
ಜಿಲ್ಲಾ/ಪ್ರಾದೇಶಿಕ ದಿನಪತ್ರಿಕೆ ಸಂಪಾದಕರ ವಿಭಾಗ:
ಲೋಕದರ್ಶನ ದಿನಪತ್ರಿಕೆಯ ಸಂಪಾದಕರಾದ ಶರತಚಂದ್ರ ದೇಸಾಯಿ ಹಾಗೂ ಕನ್ನಡಮ್ಮ ದಿನಪತ್ರಿಕೆಯ ಸಂಪಾದಕರಾದ ರಾಜಕುಮಾರ್ ಟೋಪಣ್ಣವರ
ತಾಲ್ಲೂಕು ವರದಿಗಾರರ ವಿಭಾಗ:
ವಿಜಯವಾಣಿ ದಿನಪತ್ರಿಕೆ ಅಥಣಿ ವರದಿಗಾರರಾದ ರಾಜು ಗಾಲಿ, ಕನ್ನಡಪ್ರಭ ದಿನಪತ್ರಿಕೆಯ ಯಮಕನಮರಡಿ ವರದಿಗಾರರಾದ ಕೆ.ಎಂ.ಕರ್ನಾಚಿ
ಪತ್ರಿಕಾ ವಿತರಕರ ವಿಭಾಗ
ಯಮಕನಮರಡಿಯ ಪತ್ರಿಕಾ ವಿತರಕರಾದ ಭೀಮಪ್ಪ ಕೋತೆಕರ.
ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ:
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಪತ್ರಕರ್ತರನ್ನು ಒಳಗೊಂಡ ಆಯ್ಕೆ ಸಮಿತಿಯು ಇತ್ತೀಚೆಗೆ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಸನ್ಮಾನಿತರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು.
ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಭಾಜನರಾದ ಮಾಧ್ಯಮ ಪ್ರತಿನಿಧಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಗಣ್ಯರುಗಳು ಸನ್ಮಾನಿಸಿದರು.












