






ಬೆಳಗಾವಿ:
ಸಚಿವ ಬಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಬಿಜೆಪಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ನಡೆದು ಇಂದಿಗೆ ಐದು ದಿನಗಳು ಕಳೆದರೂ ಸಹ ಸರ್ಕಾರವಾಗಲಿ ಅದಕ್ಕೆ ಸಂಬಂಧಿಸಿದ ಪ್ರತಿನಿಧಿಗಳಿಂದಾಗಲಿ ಯಾವುದೇ ರೀತಿಯ ಉತ್ತರಗಳು ಬಿಜೆಪಿಗೆ ಸಿಕ್ಕಿಲ್ಲ.
ಹೀಗಾಗಿ ಇಂದು ಒಂದು ಹಂತದಲ್ಲಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿತ್ತು. ಡಿಸಿ ಕಚೇರಿಯ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದು ಚನ್ನಮ್ಮ ವೃತ್ತಕ್ಕೆ ಶಿಫ್ಟ್ ಆಗಿತ್ತು. ಟೆಂಟ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಾವಿರಾರು ಕಾರ್ಯಕರ್ತರು ಚನ್ನಮ್ಮ ವೃತ್ತದತ್ತ ದಾವಿಸಿ ಬಂದಿದ್ದರಿದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸಪಡುವಂತಾಯಿತು.
ನಗರದ ಚನ್ನಮ್ಮ ವೃತ್ತದತ್ತ ಘೋಷಣೆ ಕೂಗುತ್ತ ಬಂದ ಕಾರ್ಯಕರ್ತರು ಏಕಾಎಕಿ ಟೈಯರ್ ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ದ ಹಾಗೂ ಬಿ ನಾಗೇಂದ್ರ ವಿರುದ್ಧ ಹರಿಹಾಯ್ದರು
ಏಕಾಎಕಿ ಟೈಯರ್ಗೆ ಬೆಂಕಿ ಇಟ್ಟಿದ್ದರಿಂದ ಅಲ್ಲೇ ಇದ್ದ ಪೊಲೀಸರು ಸಹ ಗಲಿಬಿಲಿಗೊಂಡರು. ನಂತರ ಪೊಲೀಸರು ಮದ್ಯಪ್ರವೇಶಿಸಿ ಟೈಯರ್ ಅನ್ನು ಪಕ್ಕಕ್ಕೆ ಸರಿಸುವ ಕೆಲಸ ಮಾಡಿದರು.ಪ್ರತಿಭಟನಯಲ್ಲಿ ಕಾರ್ಯಕರ್ತರು ಸಿಎಂ ಡಿಕೆಶಿವಕುಮಾರ್ ಹಾಗೂ ಸಚಿವ ಬಿ ನಾಗೇಂದ್ರರ ಭಾವಚಿತ್ರವನ್ನು ತಮ್ಮ ಮುಖಕ್ಕೆ ಕಟ್ಟಿಕೊಂಡು ಆಕ್ರೋಶ ಹೊರಹಾಕಿದರು. ಅಲ್ಲದೇ ಭ್ರಷ್ಟಾಚಾರದ ಬಿತ್ತಿಚಿತ್ರಗಳಿಗೆ ಬೆಂಕಿ ಇಟ್ಟು ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಇಷ್ಟೆಲ್ಲ ಆಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ವಶಕ್ಕೆ ಪಡೆಯುವ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನೂಲಾಟ ತಳ್ಳಾಟ ನಡೆದ ಘಟನೆಯೂ ಜರುಗಿತು. ಕಳೆದ ಐದು ದಿನಗಳಿಂದ ಬೆಳಗಾವಿಯಲ್ಲಿ ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದರೂ ಸಹ ಈವರೆಗೆ ರಾಜ್ಯ ಸರ್ಕಾರವಾಗಲಿ ಅದಕ್ಕೆ ಸಂಬಂಧಿಸಿದ ಸಚಿವರಾಗಲಿ ಉತ್ತರ ನೀಡಿಲ್ಲ. ವಿಶೇಷವೆಂದರೆ ಇದೆ ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯರೂ ಸಹ ಅದೇ ವಾಲ್ಮೀಕಿ ಸಮುದಾಯದವರೇ ಆಗಿದ್ದಾರೆ.









